ಕೊರೋನಾ ಜಾಗೃತಿ ಜಾಥಾ

ಕೊರೋನಾ ಜಾಗೃತಿ ಜಾಥಾ
ಪಾವಗಡ: ತಾಲ್ಲೂಕು ಆಡಳಿತ ,ಪುರಸಭೆ ,ಜಿಲ್ಲಾ  ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಕೋವಿಡ್ ೧೯ ಜನಜಾಗೃತಿ ಅರಿವು ಜಾಥ ಕಾರ್ಯಕ್ರಮವನ್ನು  ಪಾವಗಡ ನ್ಯಾಯಾಲಯ  ಆವರಣದಲ್ಲಿ  ಹಸಿರು ನಿಶಾನೆ ಮೂಲಕ  ನ್ಯಾಯಾಧೀಶರು  ಚಾಲನೆ  ನೀಡಲಾಯಿತು.
ಜನಜಾಗೃತಿ ಜಾಥಾ ಕಾರ್ಯಮದಲ್ಲಿ  ಆಟೋ ಚಾಲಕರ ಸಂಘದ ವತಿಯಿಂದ ಆಟೋಗಳ ಮುಂಭಾಗದಲ್ಲಿ  ಮಾಸ್ಕ ಧರಿಸಿ, ಪ್ರಯಾಣ  ಮಾಡಿ  ಎಂಬ ಬಿತ್ತಿ  ಪತ್ರದೊಂದಿಗೆ  ಸುಮಾರು  ೨೦೦ ಕ್ಕೂ  ಹೆಚ್ಚು ಆಟೋಗಳು  ಪಾವಗಡ ಪೊಲೀಸ್ ಹಾಗು ಆಟೋ ಚಾಲಕರ ಸಂಘದ ವತಿಯಿಂದ ಸ್ವಯಂ  ಪ್ರೇರಿತರಾಗಿ  ಪಟ್ಟಣದ  ಪ್ರಮುಖ  ರಸ್ತೆಗಳಲ್ಲಿ  ಧ್ವನಿವರ್ಧಕ  ಮುಖೆನ  ಜಾಥಾದಲ್ಲಿ  ಪಾಲ್ಗೊಂಡು  ಸಾರ್ವಜನಿಕರ  ಪ್ರಶಂಸೆಗೆ  ಮೆಚ್ಚುಗೆ  ಪಾತ್ರವಾಗಿದ್ದು  ವಿಶೇಷವಾಗಿತ್ತು
 ಆಟೋ ಚಾಲಕರ ಜಾಥಾ ಕಾರ್ಯಕ್ರಮದ  ಉಸ್ತುವಾರಿಯನ್ನು  ಆಟೋ ಚಾಲಕರ ಸಂಘದ ಅಧ್ಯಕ್ಷರಾದ ನಾಗರಾಜ್  ಉಪಾಧ್ಯಕ್ಷರಾದ  ಭಾಷಾ, ಕಾರ್ಯದರ್ಶಿ ಶಮಿ, ಹಾಗು ಆಟೋ ಚಾಲಕರ ಸಂಘದ ಪದಾಧಿಕಾರಿಗಳು ವಹಿಸಿದ್ದರು
 ಜಾಥಾ ಕಾರ್ಯಕ್ರಮದಲ್ಲಿ ನ್ಯಾಯಾಧೀಶರು, ವಕೀಲರು, ತಹಸೀಲ್ದಾರ್  ನಾಗರಾಜ್, ಪುರಸಭಾ  ಮುಖ್ಯಾಧಿಕಾರಿ  ನವೀನ  ಚಂದ್ರ  ಆರೋಗ್ಯಾಧಿಕಾರಿ ತಿರುಪತಯ್ಯ , ಸರ್ಕಾರೀ  ಅಭಿಯೋಜಕರಾದ  ಮಂಜುನಾಥ್, ಪೊಲೀಸ್ ಸಿಬ್ಬಂದಿ, ಪುರಸಭೆ ಸಿಬ್ಬಂದಿ, ತಾಲೂಕು ಆಡಳಿತ ಸಿಬ್ಬಂದಿ ,ಕೋರ್ಟ್ ಸಿಬ್ಬಂದಿ, ಆಟೋ ಚಾಲಕರು ಪಾಲ್ಗೊಂಡಿದ್ದರು

ಫ್ರೆಶ್ ನ್ಯೂಸ್

Latest Posts

Featured Videos