ಮೋದಿ ವಿರುದ್ದ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ

ಮೋದಿ ವಿರುದ್ದ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ

ಮೈಸೂರು: ಮೋದಿಯವರು ಅಚ್ಛೇ ದಿನ್ ಆಯೇಗಾ ಅಂದರು. ಮೋದಿ ಬಂದ ಮೇಲೆ ಅಚ್ಛೇ ದಿನ್ ಬಂದಿದೇಯಾ. ಮೋದಿಯವರು ಅಧಿಕಾರಕ್ಕೆ ಬಂದಾಗ ಸಿಲಿಂಡರ್ ಬೆಲೆ 450 ರೂ. ಇತ್ತು, ಈಗ 1ಸಾವಿರ ರೂ. ಆಗಿದೆ. ಮೋದಿ ಪ್ರಧಾನಿಯಾದ ಬಳಿಕ ಬೆಲೆ ಏರಿಕೆಯಾಗಿದೆ.ಇಂತಹವರಿಗೆ ವೋಟ್ ಕೊಡಬೇಕಾ..? ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ನಡೆದ ಬಿಜೆಪಿ, ಜೆಡಿಎಸ್  ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ವಿಧಾನಸಭಾ ಚುನಾವಣೆಗೂ ಮುನ್ನ ಒಮ್ಮೆ ಕೋಟೆ ಶಿವಣ್ಣ ಜೊತೆ ಮಾತನಾಡಿದ್ದೆ. ಕಾಂಗ್ರೆಸ್ ಪಕ್ಷ ಸಂವಿಧಾನ, ಜಾತ್ಯತೀತತೆ, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿದೆ. ನೀನೊಬ್ಬ ದಲಿತ ನಾಯಕನಾಗಿದ್ದು ಕೋಮುವಾದಿ ಬಿಜೆಪಿಯಲ್ಲಿರೋದು ಬೇಡ ಎಂದಿದ್ದೆ. ಬಿಜೆಪಿ ಒಂದು ಕೋಮುವಾದಿ ಪಕ್ಷ. ಮನುಸ್ಮೃತಿ ಮೇಲೆ ನಂಬಿಕೆ ಇಟ್ಟಿರುವ ಪಕ್ಷ.

ಅದಕ್ಕೆ ಬಿಜೆಪಿಯಲ್ಲಿರುವರನ್ನೆಲ್ಲ ಮನುವಾದಿಗಳು ಎಂದು ಕರೆಯೋದು. ಜಾತಿ ವ್ಯವಸ್ಥೆಯ ಕಾರಣಕ್ಕಾಗಿ ಜನ ಶಿಕ್ಷಣದಿಂದ ದೂರವಾದರು. ಸಂವಿಧಾನ ಜಾರಿ ನಂತರ ಜನರಿಗೆ ಶಿಕ್ಷಣ ಸಿಕ್ಕಿದೆ. ಸಂವಿಧಾನ ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ಹೇಳುತ್ತಿದೆ. ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಪಕ್ಷ ಅದು ಕಾಂಗ್ರೆಸ್ ಪಕ್ಷ. ಇತಿಹಾಸ ತಿಳಿಯದವರು ಭವಿಷ್ಯ ನಿರ್ಮಾಣ ಮಾಡಲಿಕ್ಕೆ ಸಾಧ್ಯವಿಲ್ಲ. ನಾವೆಲ್ಲರೂ ಸಂವಿಧಾನವನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ ಕೂಡಲೇ ದೇಶದಲ್ಲಿ ತಮ್ಮ ಪರ ಅಲೆ ಸೃಷ್ಟಿ ಆಗುತ್ತೆ ಅಂತಾ ಬಿಜೆಪಿ ಅಂದು ಕೊಂಡಿತ್ತು. ಆದರೆ ಅದೇ ವಿಚಾರ ಅವರಿಗೆ ತಿರುಗು ಬಾಣವಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಾತ್ರ ಇದ್ದಾರೆ. ಸೀತೆ ಇಲ್ಲ. ಲಕ್ಷ್ಮಣ ಇಲ್ಲ. ಹನುಮಂತ ಇಲ್ಲ. ಯಾಕೆ ಅವರನ್ನು ಬೇರ್ಪಡಿಸಿದ್ದಿರಿ? ಇವರಿಗೆ ಒಂದು ಕುಟುಂಬ ಒಟ್ಟಿಗೆ ಇರೋದು ಇಷ್ಟವಿಲ್ಲ. ಹೀಗಾಗಿ ರಾಮನ ಕುಟುಂಬ ಒಡೆದಿದ್ದಾರೆ. ಅದಕ್ಕೆ ನಾವು ಜೈ ಸೀತಾರಾಮ್ ಅಂತಾ ಘೋಷಣೆ ಕೂಗುತ್ತಾ ಇರೋದು ಎಂದು ಕಿಡಿಕಾರಿದರು.

 

ಫ್ರೆಶ್ ನ್ಯೂಸ್

Latest Posts

Featured Videos