ಸಿಎಂ ಕೊಟ್ಟ ಮಾತಿಗೆ ತಪ್ಪದ  ದಿಟ್ಟ ನಾಯಕ: ಮಾಜಿ ಜೆಡಿಎಸ್ ಶಾಸಕ

ಸಿಎಂ ಕೊಟ್ಟ ಮಾತಿಗೆ ತಪ್ಪದ  ದಿಟ್ಟ ನಾಯಕ: ಮಾಜಿ ಜೆಡಿಎಸ್ ಶಾಸಕ

ತುಮಕೂರು, ಜ. 24: ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ದಿಟ್ಟನಾಯಕರು. ಅವರು ಯಾವತ್ತೂ ವಚನ ಭ್ರಷ್ಟರಾಗಲು ಸಾಧ್ಯವಿಲ್ಲ ಎಂದು  ಮಾಜಿ ಸಚಿವ, ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸನ್ ಅಭಿಪ್ರಾಯಟ್ಟಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಗೊಂದಲಗಳು ಎಲ್ಲ ಪಕ್ಷದಲ್ಲೂ ಇದ್ದದ್ದೇ. ಆದರೆ ಯಡಿಯೂರಪ್ಪ ಪಕ್ಷಾಂತರಿಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದರು.

ಹೈ ಕಮಾಂಡ್ ಟೈಟ್ ಮಾಡಿದ್ದರಿಂದ ತಾತ್ಕಾಲಿಕವಾಗಿ ಯಡಿಯೂರಪ್ಪರಿಗೆ ಹಿನ್ನಡೆಯಾಗಿರಬಹುದು. ಆದರೆ ಕೊಟ್ಟ ಆಶ್ವಾಸನೆಯನ್ನು ಯಡಿಯೂರಪ್ಪನವರು ಎಷ್ಟೇ ಕಷ್ಟ ಬಂದರೂ ಈಡೇರಿಸುತ್ತಾರೆ ಎಂದರು. ಅಂತಹ ದಿಟ್ಟ ನಾಯಕತ್ವ ಅವರಲ್ಲಿದೆ ಎಂದು ಹಾಡಿ ಹೊಗಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos