ವಾರಿಯರ್ಸ್ ಗೆ ಚೆಕ್

  • In State
  • July 7, 2020
  • 256 Views
ವಾರಿಯರ್ಸ್  ಗೆ ಚೆಕ್

ಸವದತ್ತಿ :ಕೊರೋನಾ ವೈರಸ್ ಯಾರಿಗೂ ಹರಡದಂತೆ ನೋಡಿಕೊಳ್ಳಲು ಮತ್ತು ರೋಗವನ್ನು ತಡೆಗಟ್ಟಲ್ಲು ತಾಲ್ಲೂಕು ಆಡಳಿತದ ಜೊತೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ವಾರಿಯರ್ಸ್, ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದಾಗಿದೆ ಎಂದು ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಕೋವಿಡ್-೧೯ ಇಡೀ ದೇಶವನ್ನೆ ವ್ಯಾಪಿಸಿರುವ ಸಂದರ್ಭದಲ್ಲಿ ಜನರ ಸಹಾಯ ಸೌಲಭ್ಯಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿ ಜನರನ್ನು ರಕ್ಷಿಸುವ ಕೆಲಸ ಮಾಡುತ್ತಿವೆ. ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದರು.
ವ್ಹಿ.ಕೆ.ಜೋಶಿ, ಎಸ್.ಎಚ್.ಮುಗಳಿ, ಡಾ ಆರ್.ಬಿ.ಯರಝರವಿ, ಯಶ್ವಂತಕುಮಾರ, ಪ್ರಕಾಶ ನರಿ, ಸಂಗನಗೌಡಾ ಹಂದ್ರಾಳ, ಎನ್.ಎಮ್.ಸರಾಪ, ಪಿಎಸ್‌ಐ ಎನ್.ಐ. ಕಟ್ಟಿಮನಿಗೌಡ್ರ, ಜೆ.ಆರ್.ಮನ್ನೇರಿ, ಆರ್.ಬಿ.ಬಾಡಗಿ, ಟಿ.ಆರ್.ಪಾಟೀಲ, ಜಿ.ಎಫ್.ಪತಾರ ಸೇರಿದಂತೆ ಮತ್ತಿತರರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos