ಬಸ್ ಗಾಗಿ ವಿದ್ಯಾರ್ಥಿಗಳ ಪರದಾಟ

ಬಸ್ ಗಾಗಿ ವಿದ್ಯಾರ್ಥಿಗಳ ಪರದಾಟ

ವಿಜಯಪುರ, ಅ.19 : ಪಟ್ಟಣದಿಂದ ಬೆಂಗಳೂರಿಗೆ ತೆರಳಲು ಪ್ರತಿದಿನ ಬೆಳಗ್ಗೆ ಬಸ್ಗಳಿಲ್ಲದೆ ವಿದ್ಯಾರ್ಥಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಆಗೊಮ್ಮೆ ಈಗೊಮ್ಮೆ ಬರುವ ಬಸ್ಗಳೆಲ್ಲವೂ ಬಾಗಿಲಿನಲ್ಲಿ ಜನರು ನೇತಾಡುವಷ್ಟು ತುಂಬಿರುತ್ತವೆ. ಪಟ್ಟಣದಲ್ಲಿ 40 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದು, ಪಟ್ಟಣ ಸಾಕಷ್ಟು ಅಭಿವೃದ್ಧಿ ಹೊಂದಿದೆ. ನಿತ್ಯ ಬೆಂಗಳೂರಿಗೆ ಸಾವಿರಾರು ಉದ್ಯೋಗಿಗಳು, ವ್ಯಾಪಾರಸ್ಥರು, ವಿದ್ಯಾರ್ಥಿಗಳು ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮೀಣ ಭಾಗದಿಂದ ಹೊರಡುತ್ತಾರೆ. ಬಹುತೇಕರು ದೈನಿಕ, ಮಾಸಿಕ ಬಸ್ಪಾಸ್ ಪಡೆದಿದ್ದಾರೆ. ಅರ್ಧಗಂಟೆಗೊಮ್ಮೆ ಖಾಸಗಿ ಬಸ್ಗಳ ಸಂಚಾರವಿದ್ದರೂ ಅನಿವಾರ್ಯವಾಗಿ ಕೆಎಸ್ಆರ್ಟಿಸಿ ಬಸ್ಗಳನ್ನೇ ಅವಲಂಬಿಸಬೇಕಿದೆ.
ಬೆಳಗ್ಗೆ 10 ಗಂಟೆವರೆಗಾದರೂ ಹೆಚ್ಚುವರಿ ಬಸ್ಗಳನ್ನು ಓಡಿಸಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕೆಎಸ್ಆರ್ಟಿಸಿ ಅನುಕೂಲ ಕಲ್ಪಿಸಬೇಕು ಎಂದು ವಿದ್ಯಾರ್ಥಿ ಪ್ರಶಾಂತ್ ಮನವಿ ಮಾಡಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos