ಆಡಿಯೋ ಕುರಿತು ಸಪ್ತ ತಂಡ ರಚಿಸಿದ ಬಿಎಸ್ವೈ

ಆಡಿಯೋ ಕುರಿತು ಸಪ್ತ ತಂಡ ರಚಿಸಿದ ಬಿಎಸ್ವೈ

ಬೆಂಗಳೂರು, ನ. 4 : ಆಡಿಯೋ ಬಹಿರಂಗಗೊಂಡ ಬಗ್ಗೆ ಆಂತರಿಕ ತನಿಖೆ ನಡೆಸುಲು ಈ ಸಂಬಂಧ ಯಡಿಯೂರಪ್ಪನವರು ಏಳು ಸದಸ್ಯರ ತಂಡವೊಂದನ್ನು ರಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿಯ ಸಭೆಯಲ್ಲಿ ಸಿಎಂ ಯಡಿಯೂರಪ್ಪನವರು ಮಾತನಾಡಿ, ಆಡಿಯೋ ಕುರಿತು ಬಿಜೆಪಿ ಆಂತರಿಕ ತನಿಖೆ ಆರಂಭಿಸಿದೆ. ಹುಬ್ಬಳ್ಳಿಯ ಸಭೆಯಲ್ಲಿ ಉತ್ತರ ಕರ್ನಾಟಕದ ಏಳು ಕ್ಷೇತ್ರಗಳಾದ ಗೋಕಾಕ್, ಕಾಗವಾಡ, ಅಥಣಿ, ಹಿರೇಕೆರೂರು, ವಿಜಯನಗರ, ಯಲ್ಲಾಪುರ ಮತ್ತು ರಾಣೆಬೆನ್ನೂರು ಕ್ಷೇತ್ರಗಳ ಮುಖಂಡರ ಮೇಲೆ ರಹಸ್ಯ ರನಿಖೆ ಆರಂಭಿಸಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ನಾಯಕರ ಪಟ್ಟಿಯನ್ನು ಈ ತಂಡ ಸಿದ್ಧಪಡಿಸುತ್ತಿದೆ. ಹೋಟೆಲ್ ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ಸಪ್ತ ತಂಡ ಮುಂದಾಗಿದೆ.
ಪಕ್ಷದ ಮುಖಂಡರು ಎಂದು ಹೇಳಿಕೊಂಡು ಬೇರೆಯವರು ಸಭೆಗೆ ಹಾಜರಾಗಿದ್ದರಾ? ಸಿಸಿಟಿವಿಯಲ್ಲಿ ಸಭೆಯೊಳಗೆ ಮೊಬೈಲ್ ತಂದಿದ್ಯಾರು ಎಂಬುವುದು ಬಹುತೇಕ ಗೊತ್ತಾಗಲಿದೆ ಎನ್ನಲಾಗುತ್ತಿದೆ.  ಸಪ್ತ ತಂಡ ಎಲ್ಲಾ ಆಯಾಮಗಳಲ್ಲಿ ಆಂತರಿಕ ತನಿಖೆ ಆರಂಭಿಸಿದೆ. ಪ್ರತಿ ಹಂತದ ತನಿಖೆಯ ಮಾಹಿತಿಯನ್ನು ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos