ಬೆಡ್ ಶೀಟ್, ನೋಟ್ ಬುಕ್ ವಿತರಣೆ

ಬೆಡ್ ಶೀಟ್, ನೋಟ್ ಬುಕ್ ವಿತರಣೆ

ದಾಸರಹಳ್ಳಿ: ಶೋಷಿತರ ಏಳಿಗೆಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಶ್ರಮಿಸಿದರಾದರೂ ಇಂದಿನ ಸಮಾಜದಲ್ಲಿ ದೇಶಾದ್ಯಾಂತ ಅಪರಾದ ಶೇಕಡಾ ೬ ರಷ್ಟು ಹೆಚ್ಚಳವಾಗಿರುವುದು ದುರದೃಷ್ಟಕರ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ ಹೇಳಿದರು.
ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಅಂಚೆಪಾಳ್ಯದ ಶ್ರೀ ಕಂಠಪುರ ಬಳಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಸಂವಿಧಾನದ ಹಕ್ಕುಗಳ ಸಮಗ್ರ ರಕ್ಷಣೆಗಾಗಿ ಸ್ವಾಭಿಮಾನಿ ಜಾಗೃತಿ ಸಮಾವೇಶದಲ್ಲಿ ಕೊರೊನ ಸಂಕಷ್ಟದಲ್ಲಿರುವ ಬಡವರಿಗೆ ಬೆಡ್ ಶಿಟ್ ಹಾಗು ಮಕ್ಕಳಿಗೆ ಪುಸ್ತಕ ವಿತರಣೆಯನ್ನು ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಎನ್ ಮೂರ್ತಿ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ದಿನೇ ದಿನೇ ಮಹಿಳೆಯರ ಮೇಲಿನ ಶೋಷಣೆ ಹೆಚ್ಚಾಗುತ್ತಿದ್ದೆ, ಅದರಲ್ಲೂ ದಲಿತರ ಮೇಲಿನ ಕೌರ್ಯ ಖಂಡನಾರ್ಹ, ಉತ್ತರಪ್ರದೇಶದ ಹಥ್ರಾಸ ಘಟನೆ ಘನಘೋರ, ದೇಶದಲ್ಲಿ ೨೪೬೧ ಮಹಿಳೆಯರ ಮೇಲೆ ಹಲ್ಲಿ ನಡೆದಿದೆ, ಮೇಲ್ ಜಾತಿಯರ ದಬ್ಬಾಳಿಕೆ ಹೆಚ್ಚಾಗುತ್ತಿದೆ, ಕೋಮುವಾದ, ಜಾತ್ಯಾತೀತತೆಯನ್ನು ಸೃಷ್ಟಿಸಿ ಕೇಂದ್ರ ಸರ್ಕಾರ ನಮ್ಮ ಸಮಾಜವನ್ನು ಹಳೆ ಶಿಲಾಯುಗಕ್ಕೆ ಕೊಂಡುಯ್ಯುತ್ತಿದ್ದಾರೆ ಎಂದು ಎನ್.ಮೂರ್ತಿ ಗುಡುಗಿದರು.

ಫ್ರೆಶ್ ನ್ಯೂಸ್

Latest Posts

Featured Videos