ಅರವಿಂದ್ ಕೇಜ್ರಿವಾಲ್ 7 ದಿನ ಇಡಿ ಕಸ್ಟಡಿಗೆ

ಅರವಿಂದ್ ಕೇಜ್ರಿವಾಲ್ 7 ದಿನ ಇಡಿ ಕಸ್ಟಡಿಗೆ

ದೆಹಲಿ: ಅಬಕಾರಿ ನೀತಿ ಅಕ್ರಮ ಪ್ರಕರಣದಲ್ಲಿ ನಿನ್ನೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರನ್ನ ಬಂಧಿಸಿದ್ದ ಇಡಿ ಅಧಿಕಾರಿಗಳು ಇದೀಗ 7 ದಿನ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಇಂದು ಕೋರ್ಟ್ ಮುಂದೆ ಹಾಜರು ಪಡಿಸಿದ್ದರು ಅಧಿಕಾರಿಗಳು 10 ದಿನ ಕಸ್ಟಡಿಗೆ ಕೇಳಿದ್ದರು. ಆದ್ರೆ ಕೋರ್ಟ್ 7 ದಿನ ಕಸ್ಟಡಿಗೆ ನೀಡಿದೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಯ್ತು.

ಈ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಿಂಗ್ ಪಿನ್  ಎಂದು ಪ್ರತಿಪಾದಿಸಿರುವ ಇಡಿ, 10 ದಿನಗಳ ಕಸ್ಟಡಿಗೆ ನೀಡಬೇಕು ಎಂದು ಕೋರ್ಟ್ ಬಳಿ ಕೇಳಿತ್ತು. ವಿಚಾರಣೆಯ ಸಂಧರ್ಬದಲ್ಲಿ ಕೇಜ್ರಿವಾಲ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದ್ದಕ್ಕಿದ್ದ ಹಾಗೆ ಅವರ ಬಿಪಿ ಲೋ ಆಗಿದ್ದು ತಕ್ಷಣ ಇಡಿ ಅಧಿಕಾರಿಗಳು ಅವರನ್ನ ಆಸ್ಪತ್ರೆಗೆ ಕೊಂಡೊಯ್ದಿದ್ದರು.

ಅವರನ್ನ ಪರೀಕ್ಷೆಗೆ ಒಳಪಡಿಸಿ ಆರೋಗ್ಯ ಸ್ಥಿರವಾಗಿರುವುದನ್ನು ಧೃಢಪಡಿಸಿಕೊಂಡಿರುವ ಕೋರ್ಟ್ 7 ದಿನ ಇಡಿ ಕಸ್ಟಡಿಗೆ ನೀಡಿದೆ.

ಫ್ರೆಶ್ ನ್ಯೂಸ್

Latest Posts

Featured Videos