12ನೇ ತರಗತಿ ಪರೀಕ್ಷೆ ರದ್ದತಿಗೆ ಅರ್ಜಿ

12ನೇ ತರಗತಿ ಪರೀಕ್ಷೆ ರದ್ದತಿಗೆ ಅರ್ಜಿ

ನವದೆಹಲಿ : ಕೋವಿಡ್ ಹೆಚ್ಚುತ್ತಿದೆ. ಹಾಗಾಗಿ 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಮೇ 31ರಂದು ನಡೆಸುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಎ.ಎಂ ಖಾನ್‌ವಿಲ್ಕರ್ ಮತ್ತು ಮತ್ತು ದಿನೇಶ್ ಮಹೇಶ್ವರಿ ಅವರನ್ನು ಒಳಗೊಂಡ ಪೀಠವು ‘ಈ ಅರ್ಜಿಯ ಪ್ರತಿಯನ್ನು ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಸಿಬಿಎಸ್‌ಇ ಕಳುಹಿಸಲಾಗಿದೆಯೇ ಎಂದು ಅರ್ಜಿದಾರರನ್ನು ಕೋರ್ಟ್ ಪ್ರಶ್ನಿಸಿತು. ಈವರೆಗೆ ಸಿಬಿಎಸ್‌ಇಗೆ ಅರ್ಜಿಯ ಪ್ರತಿಯನ್ನು ಕಳುಹಿಸಿಲ್ಲ ಎಂದು ಅರ್ಜಿದಾರರು ತಿಳಿಸಿದರು.

ಸಿಬಿಎಸ್‌ಇ ಮತ್ತು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ಗೆ ಸಿಐಎಸ್‌ಸಿಇ ಅರ್ಜಿಯ ಪ್ರತಿಯನ್ನು ಕಳುಹಿಸುವಂತೆ ಅರ್ಜಿದಾರರಾದ ಮಮತಾ ಶರ್ಮಾ ಅವರಿಗೆ ಸೂಚಿಸಿರುವ ಪೀಠ, ಮೇ 31 ರಂದು ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಿ, ನಿರ್ದಿಷ್ಟ ಸಮಯದೊಳಗೆ ಫಲಿತಾಂಶವನ್ನು ಘೋಷಿಸಲು ಬೇರೆ ವಿಧಾನವನ್ನು ರೂಪಿಸುವಂತೆ ಕೇಂದ್ರ ಸರ್ಕಾರ, ಸಿಬಿಎಸ್‌ಇ, ರ್ದೇಶನ ನೀಡಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

‘ಸಿಬಿಎಸ್‌ಇ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಉಂಟಾಗಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

12ನೇ ತರಗತಿಯ ಪರೀಕ್ಷೆಗಳ ಬಗ್ಗೆ ಸಿಬಿಎಸ್‌ಇ ಜೂನ್ 1 ರಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.

ಫ್ರೆಶ್ ನ್ಯೂಸ್

Latest Posts

Featured Videos