ಅನುಷ್ಕಾಗೆ ಸ್ಟೈಲ್ ಐಕಾನ್ ಆಫ್ ದಿ ಇಯರ್ ಪಟ್ಟ

ಅನುಷ್ಕಾಗೆ ಸ್ಟೈಲ್ ಐಕಾನ್ ಆಫ್ ದಿ ಇಯರ್ ಪಟ್ಟ

ಮುಂಬೈ, ನ. 09: ಇತ್ತೀಚಿನ ದಿನಗಳಲ್ಲಿ ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿರುತ್ತಾರೆ. ಅದರಲ್ಲೂ ತಮ್ಮ ಫೋಟೋ ಶೂಟ್ ಹಾಗೂ ಸಿನಿಮಾಗಳ ಅಪ್ಡೇಟ್ಸ್ ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅನುಷ್ಕಾ ವೋಗ್ ಇಂಡಿಯಾಗಾಗಿ ಫೋಟೋಶೂಟ್ ಮಾಡಿಸಿದ್ದು, ಅದಕ್ಕೆ ವಿರಾಟ್ ಸಖತ್ ರಿಯಾಕ್ಷನ್ ಕೊಟ್ಟಿದ್ದಾರೆ.

ಫೋಟೋಶೂಟ್ನ ಚಿತ್ರಗಳನ್ನು ಅನುಷ್ಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅನುಷ್ಕಾ ಗಂಡ ವಿರಾಟ್ ಸಹ ಸಖತ್ ಕಮೆಂಟ್ ಮಾಡಿದ್ದಾರೆ.

11 ವರ್ಷದ ಸಿನಿ ಜೀವನದಲ್ಲಿ ಅನುಷ್ಕಾ 3 ಜನ ಖಾನ್ಗಳೊಂದಿಗೆ ಕೆಲಸ ಮಾಡಿದ್ದಾರೆ. 11 ವರ್ಷಗಳಲ್ಲಿ 13 ಸಿನಿಮಾಗಳಲ್ಲಿ ಅಭಿನಯಿಸಿರುವ ಅನುಷ್ಕಾಗೆ ವೋಗ್ ಈ ವರ್ಷ ಸ್ಟೈಲ್ ಐಕಾನ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಿದೆ. ‘ರಬ್ ನೆ ಬನಾದಿ ಜೋಡಿ’ ಸಿನಿಮಾದಲ್ಲಿ ಶಾರುಖ್ ಜತೆ ಅಭಿನಯಿಸುವ ಮೂಲಕ ಬಾಲಿವುಡ್ಗೆ ಎಂಟ್ರಿ ಪಡೆದವರು ಅನುಷ್ಕಾ ಶರ್ಮಾ.

 

ಫ್ರೆಶ್ ನ್ಯೂಸ್

Latest Posts

Featured Videos