ಅಮ್ಮನಾದ ಬಳಿಕ ಸಾನಿಯಾ ಕಣಕ್ಕೆ

ಅಮ್ಮನಾದ ಬಳಿಕ ಸಾನಿಯಾ ಕಣಕ್ಕೆ

ಹೈದರಾಬಾದ್ , ಜ. 13 : ಟೆನಿಸ್ ತಾರೆ ಸಾನಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಅಮ್ಮನಾದ ಬಳಿಕ ಟೆನಿಸ್ ಅಂಕಣದಿಂದ ದೂರವುಳಿದಿದ್ದ ಸಾನಿಯಾ ಮಿರ್ಜಾ ನಾಳೆಯಿಂದ ಅಂತಾರಾಷ್ಟ್ರೀಯ ಕಣಕ್ಕೆ ಮರಳಲಿದ್ದಾರೆ.
ನಾಳೆ ಆರಂಭವಾಗಲಿರುವ ಹೋಬರ್ಟ್ ಇಂಟರ್ನ್ಯಾಷನಲ್ ಟೆನಿಸ್ ಕೂಟದ ಡಬಲ್ಸ್ ವಿಭಾಗದಲ್ಲಿ ಉಕ್ರೇನ್ ನ ನಾದಿಯಾ ಕಿಚೆನಾಕ್ ಜತೆಗೂಡಿ ಅವರು ಸೆಣಸಾಟವಾಡಲ್ಲಿದ್ದಾರೆ.ಎರಡು ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಸಾನಿಯಾ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅವರು ಆಡದೇ ಇದ್ದರೂ ಫಿಟ್ನೆಸ್ ಕಾಯ್ದುಕೊಂಡಿದ್ದರು. ಜಪಾನ್ ತಾರೆ ಮಿಯು ಕಟೋವಾ ಮತ್ತು ಜಾರ್ಜಿಯಾದ ಒಕ್ಸಾನಾ ಕಲಶಿನಿಕೊವಾ ಎದುರಾಳಿಯಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos