ಜನ್ಮದಿನದ ಸಂಭ್ರಮದಲ್ಲಿ ಅದಿತಿ ಪ್ರಭುದೇವ

ಜನ್ಮದಿನದ ಸಂಭ್ರಮದಲ್ಲಿ ಅದಿತಿ ಪ್ರಭುದೇವ

ಬೆಂಗಳೂರು, ಜ. 13: ಅದಿತಿ ಪ್ರಭುದೇವ ಇದೀಗ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಹೊಂದಿರುವ ನಟಿ. ಕಿರುತೆರೆಯ ಪ್ರಸಿದ್ಧ ಧಾರಾವಾಹಿ ನಾಗಕನ್ನಿಕೆ ಮೂಲಕ ನಾಯಕನ್ನಿಕೆಯ ಸ್ವರೂಪದಲ್ಲಿ ಮನೆ ಮಾತಾಗಿದ್ದ ಅದಿತಿ ಇತ್ತೀಚಿನ ವರ್ಷಗಳಲ್ಲಿ ನಾಯಕಿಯಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುವ ಈ ನಟಿ ಈಗಾಗಲೇ ಚಿತ್ರರಂಗದಲ್ಲಿ ಒಳ್ಳೆ ಹೆಸರನ್ನು ಪಡೆದಿದ್ದಾರೆ. ಬ್ರಹ್ಮಚಾರಿ ಸರಿದಂತೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಸ್ಯಾಂಡಲ್ವುಡ್ ನಲ್ಲಿ ಟಾಪ್ ನಟಿಯರಲ್ಲಿ ಒಬ್ಬರೆನಿಸಿದ್ದಾರೆ.

ಸದ್ಯ ತೋತಾಪುರಿ ಸೇರಿದಂತೆ ಇನ್ನೆರಡು ಚಿತ್ರಗಳಲ್ಲಿ ನಟಿಸುತ್ತಿರುವ ಈ ನಟಿಗೆ ಇಂದು ಜನ್ಮದಿನದ ಸಂಭ್ರಮ. ಪ್ರತಿವರ್ಷದಂತೆ ದಾವಣಗೆರೆ ಬಳಿಯಿರುವ ಮನೆ ದೇವರಿಗೆ ಪೂಜೆ ಮಾಡಿಸಿ. ನಂತರ ಅಲ್ಲಿರುವ ಅಂಧ ಮಕ್ಕಳ ಜೊತೆ ತನ್ನ ಜನ್ಮದಿನವನ್ನ ಸಂಭ್ರಮಿಸಲಿದ್ದಾರೆ ಅದಿತಿ ಪ್ರಭುದೇವ.

ಫ್ರೆಶ್ ನ್ಯೂಸ್

Latest Posts

Featured Videos