ಸರ್ಕಾರಿ ಪ್ರೌಡಶಾಲೆಯಲ್ಲಿ ಹಿಂದಿ ದಿನಾಚರಣೆ

ಸರ್ಕಾರಿ ಪ್ರೌಡಶಾಲೆಯಲ್ಲಿ ಹಿಂದಿ ದಿನಾಚರಣೆ

ಕಮಲನಗರ: ತಾಲೂಕಿನ ಮುಧೋಳ ಗ್ರಾಮದ ಸರ್ಕಾರಿ ಪ್ರೌಡಶಾಲೆಯಲ್ಲಿ ಮಂಗಳವಾರ ನಡೆದ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಡಯಟ ಕಾಲೇಜಿನ ಉಪನ್ಯಾಸಕ ಲಕ್ಷ್ಮಣರಾವ ತುರೆ ಪಾಲ್ಗೂಂಡು ಮಾತನಾಡಿದ ಅವರು ನಮ್ಮ ರಾಷ್ಟ್ರದ 12 ರಾಜ್ಯಗಳಲ್ಲಿ ಮಾತೃಭಾಷಾ ರೂಪದಲ್ಲಿ ಹಿಂದಿ ಆಚರಣೆಯಲಿದ್ದು, ವಿವಿಧ ಜನಾಂಗಗಳ ಭಾಷೆಯಾಗಿ ವಿಕಾಸ ಹೊಂದಿದೆ. ಜನತೆ ಹಿಂದಿ ಭಾಷೆಯನ್ನು 50 ವಿಶ್ವ ವಿದ್ಯಾಲಯಗಳಲ್ಲಿ ಅಧ್ಯಯನ ಮತ್ತು ಸಂಶೋಧನೆ ನಡೆಯುತ್ತಿದೆ ಎಂದು ಹೇಳಿದರು.

ದೇಶದಲ್ಲಿ 30ಕ್ಕೂ ಹೆಚ್ಚು ರಾಜ್ಯ ಇದ್ದು, ತನ್ನದೆಯಾದ ಭಾಷೆಯ ಮಹತ್ವ ಹೊಂದಿದೆ. ಆದರೆ ಕೇಲ ರಾಜಕಾರಣಿಗಳು ತನ್ನ ಸ್ವಾರ್ಥಕ್ಕಾಗಿ ಭಾಷೆಯ ಹೆಸರಲ್ಲಿ ದೇಶವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಇಂಥಹ ರಾಜಕೀಯದಿಂದ ದೂರ ಇದ್ದು, ರಾಜ್ಯ ಭಾಷೆ, ರಾಷ್ಟ್ರ ಭಾಷೆ ಮತ್ತು ಅಂತರಾಷ್ಟ್ರೀಯ ಭಾಷೆಯನ್ನು ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ಮುಖ್ಯ ಗುರು ಸೂರ್ಯಕಾಂತ ಸಿಂಗೆ ವಹಿಸಿ ಮಾತನಾಡಿದ ಅವರು ಅವರು, ದೇಶಕ್ಕೆ ಸ್ವಾತಂತ್ರ ಲಭಿಸಿ ಆರು ದೇಶಕ ಕಳೆದರೂ ಇದುವರೆಗೂ ಹಿಂದಿ ರಾಷ್ಟ್ರ ಭಾಷೆ ಜಾರಿಗೆ ಬಂದಿಲ್ಲ ಎಂದು ವಿಷಾದ ವ್ಯಕ್ತಪಡಿಸದರು. ರಾಷ್ಟ್ರದ ಅಂಖಂಡತೆಯಲ್ಲಿ ಹಿಂದಿ ಬಾಷೆಯ ಪ್ರಮುಖ ಪಾತ್ರ ಇದೆ. ದೇಶದ ಪ್ರತಿಯೊಬ್ಬರು ದೇಶದ ಸಂವಿಧಾನ, ರಾಷ್ಟ್ರ ಧ್ವಜ ಮತ್ತು ರಾಷ್ಟ್ರ ಭಾಷೆಗೆ ಗೌರವಿಸಬೇಕು ಎಂದು ಹೇಳಿದರು.

ಹಿಂದಿ ಭಾಷೆ ಕುರಿತು ಶಾಲೆಯಲ್ಲಿ ಭಾಷಣ ಸ್ಪರ್ಧೆಯಲ್ಲಿ ಏರ್ಪಡಿಯಸಲಾಗಿದ್ದು, ಅದರಲ್ಲಿ ಪ್ರಥಮ ಮತ್ತು ದ್ವತೀಯ ಸ್ಥಾನ ಪಡೆದ ರಾಹುಲ, ಅಂಜಲಿ, ಅನುಸೂಯಾ, ಸಾಗರ, ಸರಸ್ವತಿ, ಅಕ್ಷೀತಾ, ಭಾಗ್ಯಶ್ರೀ, ಮುಕ್ಸಾನ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos