ಅವಹೇಳನಕಾರಿ ಫ್ಲೆಕ್ಸ್ ವಿರುದ್ಧ ಪ್ರತಿಭಟನೆ

ಅವಹೇಳನಕಾರಿ ಫ್ಲೆಕ್ಸ್ ವಿರುದ್ಧ ಪ್ರತಿಭಟನೆ

ಹನೂರು: ಕೆಲವು ಕಿಡಿಗೇಡಿಗಳು ಹಾಕಿದ್ದ ಅವಹೇಳನಕಾರಿ ಫ್ಲೆಕ್ಸ್ ಮಾತ್ರ ಕ್ಷೇತ್ರದಲ್ಲಿ ಅಬ್ಬರಿಸುತ್ತಿದ್ದು ನಾನಾ ಅನುಮಾನಗಳಿಗೆ ಎಡೆಮಾಡಿ ಕೊಡುತ್ತಿದೆ.
ರಾಜಕೀಯದ ಲಾಭ ನಷ್ಟಗಳ ಜೊತೆಗೆ ವೈಯಕ್ತಿಕ ಹಗೆತನ ಬಿರುಗಾಳಿಯೆಬ್ಬಿಸಿದ್ದು, ಪೊಲೀಸ್ ತನಿಖೆಯಿಂದಷ್ಟೇ ಸತ್ಯಸತ್ಯತೆ ಹೊರಬರ ಬೇಕಿದೆ.
ಕ್ಷೇತ್ರದಲ್ಲಿ ಕಿಡಿಗೇಡಿಗಳಿಂದ ಅಂಟಿಸಲಾಗಿರುವ ಶಾಸಕರು, ಸಂಸದರು ಮತ್ತು ಜಿ.ಪಂ. ತಾ.ಪಂ. ಜನಪ್ರತಿನಿಧಿಗಳ ವಿರುದ್ಧ ಅವಹೇಳನಕಾರಿ ಫ್ಲೆಕ್ಸ್ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹನೂರು ಮತ್ತು ರಾಮಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮುಖಂಡರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಜನಪ್ರತಿಗಳು ಪಟ್ಟಣದಲ್ಲಿ ಪ್ರತಿಭಟನೆ ಮೆರೆವಣೆಗೆ ಮಾಡಿ ಘಟನೆ ವಿರುದ್ದ ಖಂಡಿಸಿದರು.
ಹನೂರು ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗದ ಬೇವಿನ ಮರವೊಂದರಲ್ಲಿ ಮತ್ತು ಕ್ಷೇತ್ರದ ಹಲವೆಡೆ ಕ್ಷೇತ್ರದ ರಸ್ತೆಯಲ್ಲಿ ಎಂ.ಪಿ. ಎಂಎಲ್‌ಎ, ಜಿ.ಪಂ. ಮತ್ತು ತಾ.ಪಂ. ಸದಸ್ಯರನ್ನು ಹೂಳಲು ಗುಂಡಿಗಳನ್ನು ತೋಡಲಾಗಿದೆ, ಪ್ರಯಾಣಿಕರು ದಯವಿಟ್ಟು ಜಾಗ್ರತೆಯಿಂದ ವಾಹನ ಚಲಾಯಿಸಿರಿ, ನೊಂದ ಹನೂರು ಕ್ಷೇತ್ರದ ಮತದಾರರು ಎಂದು ಫ್ಲೆಕ್ಸ್ ಅಳವಡಿಸಲಾಗಿತ್ತು.
ಬುದುವಾರ ಮುಂಜಾನೆ ವಾಯುವಿಹಾರಕ್ಕೆ ತೆರಳುತ್ತಿದ್ದ ಪ.ಪಂ ಸದಸ್ಯರಾದ ಗಿರೀಶ್, ಹರೀಶ್‌ಕುಮಾರ್ ಇನ್ನಿತರ ಸಾರ್ವಜನಿಕರು ಇದನ್ನು ಗಮನಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos