ಮಂಗನಕಾಯಿಲೆಗೆ ಜನ ತತ್ತರ

ಮಂಗನಕಾಯಿಲೆಗೆ ಜನ ತತ್ತರ

ಚಿಕ್ಕಮಗಳೂರು, ಫೆ. 10: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮಂಗನಕಾಯಿಲೆ ಎಂಬುದು ಎಲ್ಲಂದರಲ್ಲಿ ಹರಡುತ್ತಿದೆ. ಇದರಿಂದ ಚಿಕ್ಕಮಂಗಳೂರಿನಲ್ಲಿ ಕೂಡ ಜನರು ಮಂಗನ ಕಾಯಿಲೆಯಿಂದ ಭಯ ಭೀತಿಯಲ್ಲಿದ್ದಾರೆ.

ಹೌದು, ಮಲೆನಾಡು ಶಿವಮೊಗ್ಗ ಭಾಗದಲ್ಲಿ ಹೆಚ್ಚು ಜನರಿಗೆ ಆತಂಕ ಉಂಟುಮಾಡಿದ್ದ ಮಂಗನಕಾಯಿಲೆ ಇದೀಗ ಚಿಕ್ಕಮಗಳೂರಿಗೆ ಕಾಲಿಟ್ಟಿದೆ. ಅಸ್ಸಾಂ ಮೂಲದ 3 ಜನ ಕಾರ್ಮಿಕರಿಗೆ ಮಂಗನಕಾಯಿಲೆ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಎನ್ಆರ್ ಪುರ ತಾಲೂಕಿನ ಮಡಬೂರು ಗ್ರಾಮದಲ್ಲಿ 3 ಮಂದಿ ಕಾರ್ಮಿಕರಿಗೆ ಮಂಗನಕಾಯಿಲೆ ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ. ಇವರು ಅಸ್ಸಾಂ ಮೂಲದ ಕಾರ್ಮಿಕರು ಎನ್ನಲಾಗಯತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವ ವೈದ್ಯ ಡಾ.ಸುಭಾಷ್ ನೇತೃತ್ವದ ತಂಡ ಮುಂಜಾಗ್ರತಾ ಕ್ರಮವಾಗು ಸೋಂಕು ಬೇರೆಯವರಿಗೆ ಹರಡದಂತೆ ಎಚ್ಚರಿಕೆ ವಹಿಸಿದ್ದು, ಸೋಂಕಿತರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಲಾಗುವುದು ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos