ರೈಲು ಬೋಗಿ ಶಾಲೆ ಸ್ಥಾಪನೆ..!

ರೈಲು ಬೋಗಿ ಶಾಲೆ ಸ್ಥಾಪನೆ..!

ಮೈಸೂರು, ಜ. 14 : ಮೈಸೂರಿನಲ್ಲಿ ಹೈಟೆಕ್ ರೈಲು ಬೋಗಿ ಸರ್ಕಾರಿ ಶಾಲೆ ನಿರ್ಮಾಣವಾಗಿದ್ದು, ಇದು ಭಾರತದ ಮೊದಲ ರೈಲು ಬೋಗಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ತುಕ್ಕು ಹಿಡಿದಿದ್ದ ಬೋಗಿಯೇ ಇದೀಗಾ ಪಾಠ ಕೇಳೋ ಕ್ಲಾಸ್ ರೂಂ ಆಗಿ ಪರಿವರ್ತನೆಯಾಗಿದ್ದು, ಬಣ್ಣ ಬಳಿದು ರೈಲು ಶಾಲೆಯನ್ನ ಸಿಂಗಾರಗೊಳಿಸಲಾಗಿದೆ. ಮೈಸೂರಿನ ಅಶೋಕಪುರಂನ ರೈಲ್ವೆ ವರ್ಕ್ ಶಾಪ್ ಬಳಿ ಈ ರೈಲು ಶಾಲೆ ಸ್ಥಾಪನೆಯಾಗಿದ್ದು, ರೈಲ್ವೆ ಇಲಾಖೆ ಸಿಬ್ಬಂದಿಗಳಿಂದ 45ದಿನದಲ್ಲಿ ಈ ಶಾಲೆ ರೆಡಿಯಾಗಿದೆ.
ಇನ್ನು ಆಶ್ಚರ್ಯವೆಂದ್ರೆ, ಶಾಲೆಗೆ ಬರಲ್ಲ ಅನ್ನೋ ಮಕ್ಕಳು ಕೂಡ ತಮ್ಮ ಅಕ್ಕಪಕ್ಕದ ಮನೆ ವಿದ್ಯಾರ್ಥಿಗಳಿಗೆ ನಮ್ಮ ಶಾಲೆಗೆ ಬನ್ನಿ ಎಂದು ಆಹ್ವಾನಿಸುತ್ತಿದ್ದಾರೆ. ನಾಲ್ಕು ಬೋಗಿಯಲ್ಲಿ ಹೈಯರ್ ಮತ್ತು ಪ್ರೈಮರಿ ಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ.
ರೈಲು ಶಾಲೆ ಪಕ್ಕದಲ್ಲೇ ಇ ಟಾಯ್ಲೆಟ್, ಕ್ಲಾಸ್ ರೂಂ ಒಳಗೆ ಫ್ಯಾನ್ ಲೈಟ್ ಹಾಕಲಾಗಿದೆ. ಇನ್ನು ಪ್ರಾಯೋಗಿಕವಾಗಿ ರೈಲ್ವೆ ಇಲಾಖೆ ಯಶಸ್ಸು ಕಂಡಿದ್ದು, ರೈಲಿನಲ್ಲೇ ಆಟಕ್ಕು ಪಾಠಕ್ಕು ಸಖತ್ ವ್ಯವಸ್ಥೆ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos