ಅಜರುದ್ದೀನ್ ಮಗನ ಮದುವೆ ಆಮಂತ್ರಣ

ಅಜರುದ್ದೀನ್ ಮಗನ ಮದುವೆ ಆಮಂತ್ರಣ

ಹೈದರಾಬಾದ್ , ಡಿ. 11 : ಖ್ಯಾತ ಕ್ರಿಕೆಟಿಗ ಮತ್ತು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಮನೆಯಲ್ಲೀಗ ಮದುವೆ ಸಂಭ್ರಮ. ಪ್ರಸಿದ್ಧ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಸಹೋದರಿ ಆನಮ್ ಮಿರ್ಜಾ ಅವರನ್ನು ಅಜರ್ ಮಗ ಅಸಾದುದ್ದೀನ್ ವಿವಾಹವಾಗಲಿದ್ದಾರೆ.
ಇಂದು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾದ ಅಜರ್ ಹಾಗೂ ಸಾನಿಯಾ ಕುಟುಂಬ ವಿಶೇಷ ಮದುವೆ ಆಮಂತ್ರಣ ನೀಡಿದರು. ಮುಖ್ಯಮಂತ್ರಿ ಅವರ ಪ್ರಗತಿ ಭವನ್ಗೆ ಭೇಟಿ ನೀಡಿದ ಅಜರುದ್ದೀನ್, ಅಸಾದುದ್ದೀನ್ ಹಾಗೂ ಸಾನಿಯಾ ಕುಟುಂಬ ಮದುವೆ ಸಮಾರಂಭಕ್ಕೆ ಆಮಂತ್ರಿಸಿದರು. ಆನಮ್ ಮಿರ್ಜಾ ಮದುವೆ ತಯಾರಿ ಜೋರಾಗಿದ್ದು, ಸೋಮವಾರ ಮೆಹಂದಿ ಕಾರ್ಯಕ್ರಮ ನಡೆದಿದೆ. 25 ವರ್ಷದ ಆನಮ್ 2016ರಲ್ಲಿ ಅಖ್ತರ್ ರಶೀದ್ ಎಂಬುವವರನ್ನು ಮದುವೆಯಾಗಿದ್ದರು. ಆದರೆ, ಒಂದೂವರೆ ವರ್ಷಗಳ ನಂತರ ಅವರ ಮದುವೆ ಮುರಿದುಬಿದ್ದಿತ್ತು. ಇದೀಗ ಅಸಾದುದ್ದೀನ್ ಜೊತೆಗೆ ಆನಮ್ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos