ಕೂದಲು ಉದುರುವ ಸಮಸ್ಯೆ ಮನೆ ಮದ್ದು

ಕೂದಲು ಉದುರುವ ಸಮಸ್ಯೆ ಮನೆ ಮದ್ದು

ಬೆಂಗಳೂರು, ಡಿ. 06: ಸಾಮಾನ್ಯವಾಗಿ ಈ ಚಳಿಗಾಲ ಶುರುವಾಗುತ್ತಿದ್ದಂತೆ ಕೂದಲು ಉದುರುವ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಚರ್ಮದ ಆರೈಕೆ ಜೊತೆಗೆ ಕೂದಲಿನ ಆರೈಕೆ ಬಹಳ ಮುಖ್ಯವಾಗುತ್ತದೆ. ಚಳಿಗಾಲದಲ್ಲಿ ತಲೆ ಹೊಟ್ಟು, ತಲೆಯಲ್ಲಿ ಗುಳ್ಳೆ, ಕೂದಲು ಎಣ್ಣೆಯುಕ್ತವಾಗುವುದು ಸಾಮಾನ್ಯ.

ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಚಳಿಗಾಲದಲ್ಲಿ ಕೂದಲು ಆರೈಕೆ ಮಾಡಿಕೊಂಡಲ್ಲಿ ಅಡ್ಡ ಪರಿಣಾಮವಿಲ್ಲದೆ ಕೂದಲುದುರುವ ಸಮಸ್ಯೆಯನ್ನು ದೂರ ಮಾಡಬಹುದಾಗಿದೆ.

ಈರುಳ್ಳಿ ರಸ: ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿ 15 ನಿಮಿಷ ಬಿಡಿ. ನಂತರ ತಣ್ಣನೆಯ ನೀರಿನಲ್ಲಿ ಕೂದಲು ಸ್ವಚ್ಛಗೊಳಿಸಿ.  ಹೀಗೆ ವಾರದಲ್ಲಿ 2 ಬಾರಿ ಹೀಗೆ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ನೆಲ್ಲಿಕಾಯಿ ರಸ: ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ರಸ ಸೇವನೆ ಮಾಡುವುದ್ರಿಂದಲೂ ತಲೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ದಾಲ್ಚಿನಿ: ದಾಲ್ಚಿನಿಗೆ ಜೇನು ತುಪ್ಪ ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ. ನಂತರ ಈ ಮಿಶ್ರಣವನ್ನು ತಲೆಗೆ ಹಚ್ಚಿ 20-25 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ವಾರದಲ್ಲಿ 2 ದಿನ ಹೀಗೆ ಮಾಡಿದರೆ ಪರಿಣಾಮ ಕಾಣಲು ಶುರುವಾಗುತ್ತದೆ.

ಪಪ್ಪಾಯ: ಪಪ್ಪಾಯ ಕಾಯಿಯನ್ನು ರುಬ್ಬಿ ತಲೆಗೆ ಹಚ್ಚಿ 10-15 ನಿಮಿಷ ಹಾಗೆ ಬಿಡಿ. ಇದು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.

 

 

ಫ್ರೆಶ್ ನ್ಯೂಸ್

Latest Posts

Featured Videos