ಹಸಿರು ಮಾರ್ಗ ಮೆಟ್ರೋ ಸೇವೆ

ಹಸಿರು ಮಾರ್ಗ ಮೆಟ್ರೋ ಸೇವೆ

ಹಸಿರು ಮಾರ್ಗ ಮೆಟ್ರೋ ಸೇವೆ

ಬೆಂಗಳೂರು , . 18: ಕಳೆದ ನಾಲ್ಕು ದಿನಗಳಿಂದ ಹಸಿರು ಮಾರ್ಗದ ನಮ್ಮ ಮೆಟ್ರೋ ರೈಲು ಸೇವೆ ಆರ್ ವಿ ರಸ್ತೆಯಿಂದ ಯಲಚೇನಹಳ್ಳಿ ಮಾರ್ಗದ ರೈಲು ಸ್ಥಗಿತಗೊಂಡಿತ್ತು. ಇಂತಹ ಮಾರ್ಗದ ನಮ್ಮ ಮೆಟ್ರೋ ರೈಲು ಸೇವೆ ಇಂದಿನಿಂದ ಪುನರಾರಂಭವಾಗಿದೆ. ಈ ಮೂಲಕ ಪ್ರಯಾಣಿಕರಿಗೆ ಸಂತಸದ ಸುದ್ದಿಯನ್ನು ಬಿಎಂಆರ್‌ಸಿಎಲ್ ನೀಡಿದೆ.

ಬೊಮ್ಮಸಂದ್ರದಲ್ಲಿ ವಯಡಕ್ಟ್ ಅಳವಡಿಕೆಯಿಂದಾಗಿ ಕಳೆದ ನವೆಂಬರ್ 14ರಿಂದ 17ರ ವರೆಗೆ ಆರ್‌ ವಿ ರಸ್ತೆಯಿಂದ ಯಲಚೇನಹಳ್ಳಿ ನಡುವೆ ಹಸಿರು ಬಣ್ಣದ ನಮ್ಮ ಮೆಟ್ರೋ ಸೇವೆ ಸ್ಥಗಿತಗೊಂಡಿತ್ತು. ಅಲ್ಲದೇ ಪ್ರಯಾಣಿಕರಿಗೆ ತೊಂದರೆಯಾಗದಂತೆ ಹೆಚ್ಚುವರಿಯಾಗಿ ಈ ಮಾರ್ಗದಲ್ಲಿ ಬಿಎಂಟಿಸಿ ಬಸ್‌ಗಳ ಉಚಿತ ಸೇವೆ ಕೂಡ ಬಿಎಂಆರ್‌ಸಿಎಲ್ ಕಲ್ಪಿಸಿತ್ತು.

ಎರಡನೇ ಹಂತದ ಎತ್ತರಿಸಿದ ಮಾರ್ಗದಲ್ಲಿ ಬರುವ ಬೊಮ್ಮಸಂದ್ರದಲ್ಲಿನ ವಯಡಕ್ಟ್ ಅಳವಡಿಕೆ ಕಾರ್ಯ ಮುಗಿದಿದ್ದು, ಸೋಮವಾರದಿಂದ ನಾಗಸಂದ್ರ ಹಾಗೂ ಯಲಚೇನಹಳ್ಳಿಯಿಂದ ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲು ಸೇವೆ ಎಂದಿನಂತೆ ಸಚರಿಸಲಿದೆ ಎಂದು ಮೆಟ್ರೋ ರೈಲು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos