43 ಮೀ.ಮೀ ಮಳೆ

43 ಮೀ.ಮೀ ಮಳೆ

ದೇವನಹಳ್ಳಿ, ಸೆ. 25: ಕಳೆದ 2 ದಿನಗಳಿಂದ ಮೋಡ ಮುಸುಕಿದ ವಾತಾರಣದಿಂದ ತಾಲೂಕಿನ ಹೋಬಳಿಯ ಹಲವಡೆಗಳಲ್ಲಿ ಉತ್ತಮ ಮಳೆ ಆಗಿದ್ದು, ರೈತಾಪಿ ವರ್ಗಕ್ಕೆ ಸಂತಸ ತಂದಿದೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯು ಭಾರ ಕುಸಿತದ ಪರಿಣಾಮವಾಗಿ ನೆನ್ನೆ ಸಂಜೆಯಿಂದ ರಾತ್ರಿ ವರೆಗೆ ಮಳೆ ಆಗಿದೆ. ಒಮ್ಮೊಮ್ಮೆ ಜೋರಾಗಿ ಕೆಲಕಾಲ ಜಿಟಿ ಜಿಟಿ ಮಳೆ ಆಗುತ್ತಿದೆ. ಮಳೆಯ ಪ್ರಭಾವದಿಂದ ಚಂರಂಡಿ ತುಂಬಿ ರಸ್ತೆಯಲ್ಲಿ ನೀರಿದೇ ಆರ್ಭಟ. ರಸ್ತೆಗಳಲ್ಲಿ ಇರುವ ಗುಂಡಿಗಳಲ್ಲಿ ಮತ್ತು ರಸ್ತೆಗಳಲ್ಲಿ ನೀರು ನಿಲ್ಲುವಂತೆ ಆಗಿದೆ. ರಾಗಿ ಬಿತ್ತನೆ ಆದ ನಂತರ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಈ ಮಳೆ ಆಶಾ ದಾಯಕ ವಾಗಿದೆ. ಕಳೆದ ತಿಂಗಳಿನಲ್ಲಿ ಸುರಿದ ಅಲ್ಪ ಮಳೆಗೆ ರೈತರು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಉಳುಮೆ ಮಾಡಿ ಭೂಮಿಯನ್ನು ಹದ ಗೊಳಿಸಿ ಗೊಬ್ಬರವನ್ನು ಚೆಲ್ಲಿ ಬಿತ್ತನೆ ಮಾಡಿದ ಪರಿಣಾಮ ರೈತರು ಹೊಲಗಳಲ್ಲಿ ಮೊಳಕೆ ಹೊಡೆದು ಹಚ್ಚ ಹಸಿರಿಂದ ಕಂಗೊಳಿಸಿದೆ.

ಕೃಷಿ ಇಲಾಖೆ ಮಾಹಿತಿಯ ಪ್ರಕಾರ ಹೋಬಳಿ ವಾರು ಮಳೆಯ ಪ್ರಮಾಣ : ಕಸಬ ಹೋಬಳಿ 53 ಮೀ.ಮೀ,  ಚನ್ನರಾಯ ಪಟ್ಟಣ ಹೋಬಳಿ 61 ಮೀ.ಮೀ, ಕುಂದಾಣ ಹೋಬಳಿ 27 ಮೀ.ಮೀ,  ವಿಜಯಪುರ ಹೋಬಳಿ 34 ಮೀ.ಮೀ, ಮಳೆ ಆಗಿದೆ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇವಣ್ಣ ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos