42 ತಲೆಬುರುಡೆಗಳು ಪತ್ತೆ..!

42 ತಲೆಬುರುಡೆಗಳು ಪತ್ತೆ..!

ಮೆಕ್ಸಿಕೋ ಸಿಟಿ, ಅ. 28 : ಮೆಕ್ಸಿಕೋ ಸಿಟಿಯ ಟೆಪಿಟೋ ಪ್ರದೇಶದಲ್ಲಿ ಡ್ರಗ್ಸ್ ಕಾರ್ಟೆಲ್(ಮಾದಕ ವಸ್ತು ನಿಯಂತ್ರಣ ಜಾಲ)ಗೆ ಸೇರಿದ ರಹಸ್ಯ ಪ್ರಯೋಗಾಲಯವೊಂದರಲ್ಲಿ ಮನುಷ್ಯರ 42 ತಲೆ ಬುರುಡೆಗಳು, ಕೈ ಕಾಲಿನ ಅನೇಕ ಮೂಳೆಗಳು, ಮಾರಕಾಸ್ತ್ರಗಳು ಪತ್ತೆಯಾಗಿವೆ.
ಈ ಘಟನೆ ಸಂಬಂಧ ತನಿಖೆ ತೀವ್ರಗೊಳಿಸಿರುವ ಮೆಕ್ಸಿಕೋ ಪೊಲೀಸರು ಈವರೆಗೆ 30ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಮೆಕ್ಸಿಕೋ ಅದರಲ್ಲಿಯೂ ಮೆಕ್ಸಿಕೋ ಸಿಟಿಯ ಡ್ರಗ್ಸ್ ಮಾಫಿಯಾಗೆ 40ಕ್ಕೂ ಹೆಚ್ಚು ಮಂದಿ ಬಲಿಯಾಗಿರುವ ಶಂಕೆ ಇದ್ದು ತನಿಖೆ ತೀವ್ರಗೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos