ಯೋಜನೆಯಡಿಯಲ್ಲಿ ೧೭.೫ ಕೋಟಿ ರೂ. ಅನುದಾನ ಮಂಜೂರು

  • In State
  • August 4, 2020
  • 244 Views
ಯೋಜನೆಯಡಿಯಲ್ಲಿ ೧೭.೫ ಕೋಟಿ ರೂ. ಅನುದಾನ ಮಂಜೂರು

ಕಾಗವಾಡ:ಕಾಗವಾಡ ಕ್ಷೇತ್ರದ ಶಾಸಕರು, ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಇವರ ವಿಶೇಷ ಪ್ರಯತ್ನದಿಂದ ಕಾಗವಾಡ ತಾಲೂಕಿನಲ್ಲಿ ನಬಾರ್ಡ್ ಯೋಜನೆಯಡಿಯಲ್ಲಿ ೧೬೩ ಕೋಣೆಗಳು ಕಟ್ಟಿಸಲು ೧೭.೫ ಕೋಟಿ ರೂ. ಅನುದಾನ ಮಂಜೂರುಗೊಂಡಿದ್ದು, ಉಗಾರದಲ್ಲಿ ೧೭ ಕೋಣೆಗಳು ಕಟ್ಟಿಸಲು ೨.೫ ಕೋಟಿ ರೂ. ಅನುದಾನದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ಮಂಗಳವಾರ ರಂದು ಉಗಾರ ಖುರ್ದ ಪಟ್ಟಣದ ಸ್ವಾತಂತ್ರ‍್ಯಪೂರ್ವದಲ್ಲಿ ಸ್ಥಾಪಿಸಿದ ಸರ್ಕಾರಿ ಕನ್ನಡ ಹಾಗೂ ಮರಾಠಿ ಶಾಲೆಯ ಆವರಣದಲ್ಲಿ ಶಿಥಿಲಗೊಂಡ ಕನ್ನಡ ಮಾಧ್ಯಮದ ಶಾಲೆಯ ವಿದ್ಯಾರ್ಥಿಗಳಿಗೆ ಸುಸಜ್ಜಿತ ೫ ಕೋಣೆಗಳ ಕಟ್ಟಡಕ್ಕೆ ಸಚಿವರ ಅನುಪಸ್ಥಿತಿಯಲ್ಲಿ ಕಾಗವಾಡ ತಾಲ್ಲೂಕು ಬಿಜೆಪಿ ಘಟಕ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ ಮತ್ತು ಎಲ್ಲ ಚುನಾಯಿತ ಸದಸ್ಯರ ಹಸ್ತೆಯಿಂದ ಭೂಮಿ ಪೂಜೆ ನೆರವೇರಿತು.ಅಥಣಿ ತಾಲ್ಲೂಕು ಲೊಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಜೆ.ಎ.ಹಿರೇಮಠ ಮಾಹಿತಿ ನೀಡಿ, ನಬಾರ್ಡ್ ಯೋಜನೆಯಡಿಯಲ್ಲಿ ೧೬೩ ಶಾಲಾ ಕೋಣೆಗಳು ಕಟ್ಟಿಸಲು ೧೭.೫ ಕೋಟಿ ರೂ. ಅನುದಾನ ಸಚಿವರಾದ ಶ್ರೀಮಂತ ಪಾಟೀಲರ ಪ್ರಯತ್ನದಿಂದ ಮಂಜೂರುಗೊಂಡಿದ್ದು, ಉಗಾರ ಖುರ್ದ ಪಟ್ಟಣದಲ್ಲಿ ಸರ್ಕಾರಿ ಕನ್ನಡ ಹಾಗೂ ಮರಾಠಿ ಶಾಲಾ ಕಟ್ಟಡಕ್ಕಾಗಿ ೬೫ ಲಕ್ಷ, ಉಗಾರ ಕಾಲನಿಯ ಉರ್ದು ಶಾಲೆ ೨ ಕೋಣೆಗಾಗಿ ೨೪ ಲಕ್ಷ, ದತ್ತವಾಡಿ ೧ ಕೋಣೆ ೧೨ ಲಕ್ಷ, ಫರೀದಖಾನವಾಡಿ ೩ ಕನ್ನಡ, ೨ ಮರಾಠಿ ಶಾಲಾ ಕೋಣೆ ಕಟ್ಟಡಕ್ಕಾಗಿ ೬೫ ಲಕ್ಷ, ಲಕ್ಷ್ಮೀ ಮಂದಿರ ಹತ್ತಿರದ ಕನ್ನಡ ಶಾಲೆಗೆ ೧ ಕೋಣೆಗೆ ೧೨ ಲಕ್ಷ, ರೇಣುಕಾ ನಗರದ ೧ ಕೊಣೆಗೆ ೧೨ ಲಕ್ಷ ಹೀಗೆ ೨.೫ ಕೋಟಿ ರೂ. ಅನುದಾನದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗುಣಮಟ್ಟದ ಕಟ್ಟಡಗಳು ನಿರ್ಮಿಸಬೇಕೆಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಕಾಗವಾಡ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ ಮಾತನಾಡಿ, ಕಾಗವಾಡ ಕ್ಷೇತ್ರ ಶಾಸಕರು, ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಇವರು ಶಿಕ್ಷಣದ ಕಾಳಜಿ ಹೊಂದ್ದಿದ್ದವರು. ಕಾಗವಾಡ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ೧೭.೫ ಕೋಟಿ ರೂ. ಕನ್ನಡ ಶಾಲಾ ಕಟ್ಟಡಕ್ಕಾಗಿ ಅನುದಾನ ಮಂಜೂರುಗೊಳಿಸಿದ್ದಾರೆ. ಉಗಾರದಲ್ಲಿ ೧೭ ಕೋಣೆಗಳು ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿದ್ದೇವೆ. ಇದೊಂದು ಅಭಿಮಾನದ ಸಂಗತಿ ಎಂದರು.

ಸಮಾರಂಭದಲ್ಲಿ ಕಾಗವಾಡ ಬಿಇಓ ಮಲ್ಲಪ್ಪಾ ಮುಂಜೆ, ಸಿ.ಎಂ.ಸಾಂಗಲೆ, ಲೊಕೋಪಯೋಗಿ ಇಲಾಖೆ ಅಭಿಯಂತ ಆರ್.ಪಿ.ಅವತಾಡೆ, ಪುರಸಭೆ ಸದಸ್ಯರಾದ ವಿಜಯ ಆಸೂದೆ, ಪ್ರಫೂಲ್ ಥೋರುಶೆ, ಅವಿನಾಶ ಮೋರೆ, ಯೊಗೇಶ ಕುಂಬಾರ, ಸಂಜಯ ಪಾಟೀಲ, ನಂದಿಣಿ ಸುಜಯ ಫರಾಕಟ್ಟೆ, ಮೋಹನ ಕಾರ್ಚಿ, ಸಚಿವರ ಆಪ್ತ ಸಹಾಯಕ ವಿನಾಯಕ ಶಿಂಧೆ, ಪ್ರತಾಪ ಜತ್ರಾಟೆ, ಗುತ್ತಿಗೆದಾರರಾದ ಸುನೀಲ ಅವಟಿ, ಎಸ್.ಬಿ.ಮಾಲಗಾಂವೆ, ಮಾಜಿ ಜಿಪಂ ಸದಸ್ಯನಿ ತೇಜಸ್ವಿನಿ ದಾನೋಳ್ಳಿ, ದತ್ತಾತ್ರ ಜೋಶಿ, ರಾಮಚಂದ್ರ ಥೋರುಶೆ, ವೀರಭದ್ರ ಕಟಿಗೇರಿ, ಲಕ್ಷ್ಮಣ ಕಟಿಗೇರಿ, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos