15 ವರ್ಷಗಳ ವಿವಾದಿತ ವಿಬ್ಗೇರ್ ರಸ್ತೆಗೆ ಮುಕ್ತಿ

15 ವರ್ಷಗಳ ವಿವಾದಿತ ವಿಬ್ಗೇರ್ ರಸ್ತೆಗೆ ಮುಕ್ತಿ

ಮಹದೇವಪುರ, ಡಿ. 14: ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ದೊಡ್ಡನೆಕ್ಕುಂದಿ ವಾರ್ಡ್ ನ ವಿಬ್ಗ್ಯಾರ್ ಶಾಲಾಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸ್ಥಳಿಯ ಶಾಸಕ ಅರವಿಂದ ಲಿಂಬಾವಳಿ ಅವರು ಚಾಲನೆ ನೀಡಿದರು.

ಮಹದೇವಪುರ ಕ್ಷೇತ್ರದ ದೊಡ್ಡನಕ್ಕುಂದಿ ವಾರ್ಡ್ ನ ತೂಬರಹಳ್ಳಿಯ ವಿಬ್ಗ್ಯಾರ್ ರಸ್ತೆ ಸುಮಾರು 15 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು, ಭೂಮಾಲೀಕರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರಿಂದ ಕಾಮಗಾರಿ ವಿಳಂಬವಾಗಿತ್ತು, ಇಂದು ಶಾಸಕರ ಉಪಸ್ಥಿತಿಯಲ್ಲಿ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದ ಅರವಿಂದ ಲಿಂಬಾವಳಿ ಅವರು, ಸಾರ್ವಜನಿಕರ ಹಿತ ದೃಷ್ಟಿಯಿಂದ ಭೂಮಾಲೀಕರೊಂದಿಗೆ‌ ಚರ್ಚಿಸಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಸಾರ್ವಜನಿಕರಿಗೆ ತುಂಬಾ ಸಮಸ್ಯೆ ಯಾಗಿದ್ದ ಈ ರಸ್ತೆಯ ಅಭಿವೃದ್ಧಿ ಕಾರ್ಯದಿಂದ ಸ್ಥಳೀಯರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

ಸ್ಥಳದ ಮಾಲೀಕರಿಗೆ ಸರ್ಕಾರ ಹಾಗೂ ಬಿಬಿಎಂಪಿ ವತಿಯಿಂದ ಟಿ.ಡಿ.ಆರ್ ಗೆ ವ್ಯವಸ್ಥೆ ಮಾಡಲಾಗುವುದೆಂದು ಭರವಸೆ  ನೀಡಿದರು. ಇದೇ ವೇಳೆ ಮಾತನಾಡಿದ ಸ್ಥಳಿಯ ಪಾಲಿಕೆ ಸದಸ್ಯೆ ಶ್ವೇತಾವಿಜಯ್ ಕುಮಾರ್, ಬಹು ವರ್ಷಗಳ ಸಾರ್ವಜನಿಕ ಸಮಸ್ಯೆಗೆ ಇಂದು ಮುಕ್ತಿ ದೊರೆತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹದೇವಪುರ ವಲಯದ ಜಂಟಿ ಆಯುಕ್ತ ವೆಂಕಟಾಚಲಪತಿ, ಮುಖ್ಯ ಅಭಿಯಂತರರು ಪರಮೇಶ್ವರಯ್ಯ, ಇಇ ಮುನಿರೆಡ್ಡಿ, ಡಿಸಿಪಿ ಅನೂಚೇತ್, ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜಾರೆಡ್ಡಿ, ಜಮೀನು ಮಾಲಿಕ ರಘು, ಮುಖಂಡರಾದ ಹೂಡಿ ವಿಜಯ್ ಕುಮಾರ್, ಸಂತೋಷ್, ಮುನಿರಾಜು, ಅನೀಲ್ ರೆಡ್ಡಿ, ನವೀನ್ ರೆಡ್ಡಿ, ನಂದೀಶ್ ರೆಡ್ಡಿ, ಚಿನ್ನಪ್ಪನಹಳ್ಳಿ ಸತೀಶ್, ಶಿವಾ ರೆಡ್ಡಿ,  ಮತ್ತಿತರರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos