ಜಲ್ಲಿಕಟ್ಟು ಕ್ರೀಡೆಗೆ 1 ಬಲಿ 30 ಜನರಿಗೆ ಗಂಭೀರ ಗಾಯ

ಜಲ್ಲಿಕಟ್ಟು ಕ್ರೀಡೆಗೆ 1 ಬಲಿ 30 ಜನರಿಗೆ ಗಂಭೀರ ಗಾಯ

ಚೆನ್ನೈ, ಜ. 20 ಅವನಿಪುರದಲ್ಲಿ ನಡೆಯುವ ಜಲ್ಲಿಕಟ್ಟು ಕ್ರೀಡೆಯ ವೇಳೆ ಅವಗಢ ಸಂಭವಿಸಿ ಓಬ್ಬ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ.

ಈ ಘಟನೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅದರಲ್ಲಿ 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಒಂದು ಹೋರಿಯೂ ಮೃತಪಟ್ಟಿದೆ ಎನ್ನಲಾಗಿದೆ.

ಅವನಿಪುರಂನ ಸೈಂಟ್ ಅಂಥೋನಿ ಚರ್ಚ್ ಫೆಸ್ಟಿವಲ್ ಸಹಯೋಗದೊಂದಿಗೆ ಈ ಜಲ್ಲಿಕಟ್ಟು ಕ್ರೀಡೆ ಆಯೋಜಿಸಲಾಗಿತ್ತು. ಸಚಿವ ಜೆ. ಭಾಸ್ಕರನ್ ಮತ್ತು ಜಿಲ್ಲಾಧಿಕಾರಿ ಜಯಕಾಂತನ್ ಪಾಲ್ಗೊಂಡಿದ್ದರು.

ಒಟ್ಟು 600ಕ್ಕೂ ಹೆಚ್ಚು ಹೋರಿಗಳು ಕೂಟದಲ್ಲಿ ಭಾಗವಹಿದ್ದವು. ತಮಿಳು ನಾಡಿನ ನಾನಾ ಭಾಗಗಳಿಂದ ಉತ್ಸಾಹಿ ಯುವಕರು ಆಗಮಿಸಿ ಕ್ರೀಡೆಯಲ್ಲಿ ಭಾಗವಹಿಸಿದ್ದರು.

ಈ ಬಾರಿಯ ಪೊಂಗಲ್ ಗೆ ತಮಿಳುನಾಡಿನ ಮೂರು ಕಡೆ ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸಲಾಗಿತ್ತು. ಮಧುರೈ ಸಮೀಪದ ಅವನಿಪುರಂ, ಪಲಮೇಡು ಮತ್ತು ಅಲಂಕನಲ್ಲೂರಿನಲ್ಲಿ ಜಲ್ಲಿಕಟ್ಟು ನಡೆದಿದೆ.

 

ಫ್ರೆಶ್ ನ್ಯೂಸ್

Latest Posts

Featured Videos