ವಿಮಾನದಲ್ಲಿ 185 ಪ್ರಯಾಣಿಕರು ಅಸ್ವಸ್ಥ, 10 ಮಂದಿ ಆಸ್ಪತ್ರೆಗೆ ದಾಖಲು

ವಿಮಾನದಲ್ಲಿ 185 ಪ್ರಯಾಣಿಕರು ಅಸ್ವಸ್ಥ, 10 ಮಂದಿ ಆಸ್ಪತ್ರೆಗೆ ದಾಖಲು

ಒಟ್ಟಾವಾ: ಕೆನಡಾದ ಕ್ವಿಬೆಕ್ ಏರ್‌ಪೋರ್ಟ್‌ನಲ್ಲಿ ಒಟ್ಟು 185 ಪ್ರಯಾಣಿಕರು ವಿಮಾನ ಏರಿದ ಕೆಲವೇ ನಿಮಿಷಗಳಲ್ಲಿ ಅಸ್ವಸ್ಥರಾದ ಘಟನೆ ವರದಿಯಾಗಿದೆ. ಅಸ್ವಸ್ಥರ ಪೈಕಿ 10 ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏರ್ ಟ್ರಾನ್‌ಸ್ಯಾಟ್ ಫ್ಲೈಟ್ 782ರಲ್ಲಿ ಪ್ರಯಾಣಿಸಲು ಅಣಿಯಾಗಿದ್ದ ಎಲ್ಲ ಪ್ರಯಾಣಿಕರು ವೈದ್ಯರ ಬಳಿ ಪರೀಕ್ಷೆ ನಡೆಸಿದ್ದರು. ವಿಮಾನ ಟೇಕ್-ಆಫ್ ಆಗುವ ಮೊದಲು ಪ್ರಯಾಣಿಕರಿಗೆ ಕಣ್ಣು ತುರಿಕೆ, ತಲೆ ಸುತ್ತುವಿಕೆ ಹಾಗೂ ವಾಂತಿ ಸಹಿತ ಹಲವು ಲಕ್ಷಣಗಳು ಕಾಣಿಸಿಕೊಂಡಿದ್ದವು ಎಂದು ವರದಿಯಾಗಿದೆ.

ಐವರು ಪ್ರಯಾಣಿಕರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರರನ್ನು ವಿಮಾನದಿಂದ ಬೇರೆಡೆಗೆ ಕರೆದೊಯ್ಯಲಾಗಿದೆ. ಅಗ್ನಿ ಶಾಮಕ ದಳ ವಿಮಾನವನ್ನು ಖಾಲಿಗೊಳಿಸಿದ್ದಾರೆ. ವಿಮಾನದ ಗಾಳಿಯ ಗುಣಮಟ್ಟ ಆರೋಗ್ಯಕರವಾಗಿರುವುದು ಕಂಡುಬಂದಿದೆ.

ಘಟನೆಯ ಬಗ್ಗೆ ಏರ್‌ಲೈನ್ ತನಿಖೆ ಆರಂಭಿಸಿದೆ. ವಿಮಾನದೊಳಗೆ ಮುಕ್ತ ಗಾಳಿ-ಬೆಳಕಿನ ಸಂಚಾರದಲ್ಲಿನ ಸಮಸ್ಯೆಯೇ ಇದಕ್ಕೆ ಕಾರಣ ಎಂದು ವಿಮಾನನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos