ಕೊರಟಗೆರೆಯಲ್ಲಿ ಯುವಕನ ಕೊಲೆ

ಕೊರಟಗೆರೆಯಲ್ಲಿ ಯುವಕನ ಕೊಲೆ

ಕೊರಟಗೆರೆ, ಮೇ. 19 : ಕಾರು ಚಾಲಕನ ಹೊಟ್ಟೆಗೆ ಚಾಕುವಿನಿಂದ ಚುಚ್ಚು ಕೊಲೆ ಮಾಡಿರುವ ಘಟನೆ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.
ಕೊರಟಗೆರೆ ತಾಲ್ಲೂಕು ಕಸಬಾ ಹೋಬಳಿ ಹಂಚಿಹಳ್ಳಿ . ಪಂ.ವ್ಯಾಪ್ತಿಯ ಮಲ್ಲೇಶಪುರ ಗ್ರಾಮದ ಹನುಮಂತರಾಯಪ್ಪನ ಮಗ ಕಾರು ಚಾಲಕ ಗಿರೀಶ್ ಕೊಲೆಯಾದ ಯುವಕ.
ಬೆಂಗಳೂರು ನಗರದಲ್ಲಿ ಕಾರು ಚಾಲಕನಾಗಿದ್ದ ಮೃತ ಗಿರೀಶ್, ಕೊರೊನಾ ಲಾಕ್ಡೌನ್ನಿಂದ ಕಳೆದ 20 ದಿನದ ಹಿಂದೆ ಸ್ವಗ್ರಾಮ ಮಲ್ಲೇಶಪುರಕ್ಕೆ ಆಗಮಿಸಿದ್ದ.
ಅನೈತಿಕ ಸಂಬಂಧದ ಶಂಕೆ ಹಿನ್ನಲೆ ಮಲ್ಲೇಶಪುರದ ನಂಜುಂಡಪ್ಪನ ಮಗ ನಟರಾಜು ಮತ್ತು ಗಿರೀಶ್ ನಡುವೆ ಕುಡಿದ ಅಮಲಿನಲ್ಲಿ ಅನೈತಿಕ ಸಂಬಂಧ ವಿಚಾರಕ್ಕೆ ಗಲಾಟೆ ನಡೆದಿದ್ದು, ಕಾರು ಚಾಲಕನ ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಕೊಲೆ ಸೋಮವಾರ ಮಧ್ಯರಾತ್ರಿ ನಡೆದಿದೆ.
ತುಮಕೂರು ಎಸ್ಪಿ ಡಾ.ಕೆ.ವಂಶಿಕೃಷ್ಣ, ಮಧುಗಿರಿ ಡಿವೈಎಸ್ಪಿ ಧರಣೀಶ್, ಕೊರಟಗೆರೆ ಸಿಪಿಐ ನಧಾಪ್, ಪಿಎಸ್ಐ ಮುತ್ತುರಾಜು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos