ಅಂಕಪಟ್ಟಿಗೆ ಹಣ ಪಡೆಯುತ್ತಿದ್ದ ಆರೋಪಿಗೆ ಬಲೆ ಬೀಸಿದ ಪೊಲೀಸರು

ಅಂಕಪಟ್ಟಿಗೆ ಹಣ ಪಡೆಯುತ್ತಿದ್ದ ಆರೋಪಿಗೆ ಬಲೆ ಬೀಸಿದ ಪೊಲೀಸರು

ಬೆಂಗಳೂರು: ಖಾಸಗಿ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಅಂಕಪಟ್ಟಿಗೆ ಹಣ ಪಡೆಯುತ್ತಿದ್ದ ಆರೋಪಿಯನ್ನು ಪೊಲೀಸ್ ಅಧಿಕಾರಿಗಳು ಹುಡುಕುತ್ತಿದ್ದಾರೆ.

ಪ್ರತಿಯೊಂದು ವಿದ್ಯಾರ್ಥಿಗಳ ಹತ್ತಿರ ಅಂಕ ಪಟ್ಟಿ ನೀಡುವಾಗ ಸುಮಾರು ಹತ್ತರಿಂದ ಹದಿನೈದು ಸಾವಿರ ಹಣ ಪಡೆಯುತ್ತಿದ್ದ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದಲ್ಲಿರುವ ಖಾಸಗಿ ಸಂಸ್ಥೆಯೊಂದು ನಾಗರಾಜ್ ಎಂಬ ವ್ಯಕ್ತಿಯ ಮೇಲೆ ದೂರು ದಾಖಲಿಸಿದ್ದು, ಇದೀಗ ನಾಗರಾಜ ಎಂಬ ಆರೋಪಿಯನ್ನು ಪೊಲೀಸ್ ಅಧಿಕಾರಿಗಳು ಹುಡುಕಾಡುತ್ತಿದ್ದಾರೆ.

ದೂರು ದಾಖಲಾಗಿದ್ದಂತೆ ನಾಗರಾಜ ಎಂಬ ಆರೋಪಿಯು ಕಣ್ಮರೆಯಾಗಿದ್ದಾರೆ ಆದ್ದರಿಂದ ಪೊಲೀಸ್ ಅಧಿಕಾರಿಗಳು ಇವರನ್ನು ಹುಡುಕುತ್ತಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಪ್ರಕರಣದಲ್ಲಿ ಬಿಜೆಪಿ ಮಾಜಿ ಶಾಸಕನ ಕೈವಾಡವಿದೆ: ಕೈ ಶಾಸಕ

ಹೌದು, ಬೆಂಗಳೂರು ನಗರದಲ್ಲಿರುವ ಪ್ರತಿಷ್ಠಾ ಕಾಲೇಜು ಒಂದರಲ್ಲಿ ನಾಗರಾಜ್ ಎಂಬ  ವ್ಯಕ್ತಿಯು (Front office executive) ಆಗಿ ಕಾರ್ಯನಿರ್ವಹಿಸುತ್ತಿದ್ದು ಇವನು ಅಂಕಪಟ್ಟಿ ಕೊಡುವ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಗಳಿಂದ ಹಣ ಪಡೆಯುತ್ತಿದ್ದಾರೆಂದು ಅವರ ಮೇಲೆ ದೂರು ದಾಖಲಾಗಿದ್ದು ಆರೋಪಿ ಬಿ.ಇ. ನಾಗರಾಜುರನ್ನು ಬಂಧಿಸಲು ವೈಟ್‌ಫೀಲ್ಡ್ ಪೊಲೀಸರು ತೀವ್ರ ಶೋಧ ಕರ್ಯ ಕೈಗೊಂಡಿದ್ದಾರೆ.

ನಗರದ ಪ್ರತಿಷ್ಠಿತ ಕಾಲೇಜು ಸಂಸ್ಥೆ ಒಂದರಲ್ಲಿ ಆರೋಪಿ ಬಿ.ಇ. ನಾಗರಾಜು, ಗುಮಾಸ್ತನಾಗಿ (Front office executive) 2010 ರಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಬಂದ ಹೊಸದರಲ್ಲಿ ಅತ್ಯಂತ ವಿನಮ್ರದಿಂದ ಕೆಲಸ ನಿರ್ವಹಿಸುತ್ತಿದ್ದ ನಾಗರಾಜು ಕಾಲೇಜಿನ ಆಡಳಿತದ ಬಗ್ಗೆ ಎಲ್ಲವನ್ನು ತಿಳಿದುಕೊಂಡಿದ್ದರು. ಬೆಂಗಳೂರು ನಾರ್ತ್ ಯೂನಿವರ್ಸಿಟಿಯಲ್ಲಿ ಸದರಿ ಕಾಲೇಜಿಗೆ ಸಂಬಂಧಿಸಿದ ಅಂಕಪಟ್ಟಿಯನ್ನು ಕಾಲೇಜಿಗೆ ತಂದು ವಿದ್ಯಾರ್ಥಿಗಳಿಗೆ ನೀಡುವ ಕೆಲಸ ನಿರ್ವಹಿಸುತ್ತಿದ್ದರು. ಆದರೆ, ನಾಗರಾಜ್ ರವರು ಅಂಕಪಟ್ಟಿ ಕೊಡುವಾಗ ವಿದ್ಯಾರ್ಥಿಗಳಿಂದ ರೂ. ೧೮೦೦ ರಿಂದ ರೂ. ೬೭೦೦/-ಗಳವರೆಗೆ ಹಣವನ್ನು ತೆಗೆದುಕೊಳ್ಳುತ್ತಿದ್ದರು ಎಂಬ ಬಗ್ಗೆ ೨೦೨೩ರಲ್ಲಿ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೆ ಹಲವಾರು ಅಕ್ರಮ ಕಾನೂನು ಚಟುವಟಿಕೆಗಳಲ್ಲಿ ನಾಗರಾಜು ಭಾಗಿಯಾಗಿರುವುದು ಕಂಡು ಬಂದಿತು.

ಈ ಹಿನ್ನೆಲೆ ನಾಗರಾಜುರವರನ್ನು ಪ್ರಾಂಶುಪಾಲರು ವಿಚಾರಿಸಿದಾಗ ಅವನು ಕೂಗಾಡಿ, ಅಸಭ್ಯವಾದ ಮಾತುಗಳನ್ನಾಡಿದ್ದಾನೆ. ಸೀದಾ ಪ್ರಾಂಶುಪಾಲರ ಕ್ಯಾಬಿನೇಟ್‌ಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ. ಮಹಿಳೆಯಾದ ಪ್ರಾಂಶುಪಾಲರು ಕೂಡಲೇ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಆರೋಪಿಯು ತನ್ನ ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಅರುಣ್, ಲಿಖಿತ್, ವಿಕಾಸ್‌ರವರೊಂದಿಗೆ ಸೇರಿಕೊಂಡು ಅಕ್ರಮವೆಸಗಿರುವುದಾಗಿ ದೂರು ದಾಖಲಾಗಿದೆ.

ಪೊಲೀಸರು ಇತನ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದು, ಶೀಘ್ರದಲ್ಲೇ ನಾಗರಾಜುವನ್ನು ಬಂಧಿಸುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos