ಬೆಂಗಳೂರು, ಫೆ.28, ನ್ಯೂಸ್ಎಕ್ಸ್ ಪ್ರೆಸ್: ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಹೆಸರಿನಲ್ಲಿ ನಕಲಿ ಪತ್ರ ಹೆಡ್ ಬಳಸಿ ನಟ ವಿಜಯ್ ದೇವರಕೊಂಡ ಅವರಿಗೆ ಪತ್ರ ಬರೆಯಲಾಗಿದೆ. ಜಯನಗರದ 4ನೇ ಬ್ಲಾಕ್ನಲ್ಲಿರುವ ಎಸ್.ಎಲ್.ಕೃಷ್ಣ ಎಂಬ ಆರೊಪಿ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರ ನಕಲು ಪತ್ರ ಹೆಡ್ ಸೃಷ್ಟಿಸಿ ವಿಜಯ್ ದೇವರಕೊಂಡ ಅವರ ಅಡ್ರೆಸ್ಗೆ ಸ್ಪೀಡ್ ಪೋಸ್ಟ್ ಮಾಡಿದ್ದಾನೆ. ನಮ್ಮ ಕಂಪನಿಯ officers near by ಎಂಬ ಮೊಬೈಲ್ ಅಪ್ಲಿಕೇಶನ್ ಒಂದಕ್ಕೆ ಬ್ರಾಂಡ್ ಅಂಬಾಸಿಡರ್ ಅಥವಾ ಪಾರ್ಟನರ್ ಆಗಿ ಬನ್ನಿ ಅಂತಾ ಸುಳ್ಳು ಪತ್ರ ಬರೆದು ಪೋಸ್ಟ್ ಮಾಡಿದ್ದ. ಅಲ್ಲದೇ ಪತ್ರದಲ್ಲಿ ಸುಧಾಮೂರ್ತಿ ಅವರ ನಕಲಿ ಸಹಿ ಕೂಡ ಮಾಡಿದ್ದಾನೆ.
ಆದರೆ ವಿಜಯ್ ದೇವರಕೊಂಡ ಅವರ ಸರಿಯಾದ ವಿಳಾಸ ಬರೆಯದ ಕಾರಣಆ ಪತ್ರವನ್ನು ಇನ್ಫೋಸಿಸ್ ಕಚೇರಿಗೇ ಹಿಂದುರುಗಿಸಿದ್ದಾರೆ. ಈ ವೇಳೆ ಸುಧಾಮೂರ್ತಿ ಪತ್ರ ಚೆಕ್ ಮಾಡಿದಾಗ ಅಸಲಿ ಅಂಶ ಬೆಳಕಿಗೆ ಬಂದಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.