ಯುವತಿಯ ಮೈಮೇಲೆ ಮೆಟ್ರೋ ರೈಲು

ಯುವತಿಯ ಮೈಮೇಲೆ ಮೆಟ್ರೋ ರೈಲು

ನವದೆಹಲಿ, ಮಾ. 13, ನ್ಯೂಸ್ ಎಕ್ಸ್ ಪ್ರೆಸ್:  ಇಂದು ದೆಹಲಿಯಲ್ಲಿ ಯುವತಿಯ ಮೈಮೇಲೆ ಮೆಟ್ರೋ ರೈಲು ಹರಿದರೂ ಯುವತಿ ಬದುಕಿ ಬಂದಿರುವ ಘಟನೆ ನಡೆದಿದೆ. ಯುವತಿ ಕೈ ತಪ್ಪಿ ಹಳಿಯ ಮೇಲೆ ಬಿದ್ದಿರುವ 2000 ರೂವನ್ನು ಎತ್ತಿಕೊಳ್ಳಲು ಕೆಳಗಿಳಿದಿದ್ದ ಯುವತಿ ಮೇಲೆ ಮೆಟ್ರೋ ಹರಿದಿದೆ.ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಆಕೆ ಪಾರಾಗಿದ್ದಾಳೆ.

ಆಕೆಯ ಕೈಯಲ್ಲಿದ್ದ 2000 ರೂ ನೋಟೊಂದು ಹಾರಿ ಹಳಿಯ ಮೇಲೆ ಬಿದ್ದಿದೆ. ಅಷ್ಟರಲ್ಲಿ ಮೆಟ್ರೊ ಕೂಡ ಬಂದಿದೆ. ಆದರೆ ನೋಟನ್ನು ಎತ್ತಿಕೊಳ್ಳುವ ಭರದಲ್ಲಿ ಯುವತಿ ಮೆಟ್ರೋ ಬರುತ್ತಿರುವುದು ನೋಡದೆ ಕೆಳಗೆ ಹಾರಿದ್ದಾಳೆ.

ಮೆಟ್ರೊ ಬರುತ್ತಿರುವುದು ಆಕೆಯ ಗಮನಕ್ಕೆ ಬಂದಿದೆ. ಹೀಗಾಗಿ ಪ್ರಾಣ ಕಾಪಾಡಿಕೊಳ್ಳಲು ಹಳಿಯ ಮಧ್ಯೆ ಮಲಗಿ ಬಿಟ್ಟಿದ್ದಾರೆ. ಅಲ್ಲಿದ್ದವರೆಲ್ಲ ಯುವತಿ ಸತ್ತಿದ್ದಾಳೆ ಎಂಬ ಆತಂಕದಿಂದ ನೋಡುತ್ತಿರುವಾಗ ಆಕೆ ಕೈಯಲ್ಲಿ 2000 ರೂ ನೋಟು ಹಿಡಿದುಕೊಂಡು ಎದ್ದು ಬಂದಿದ್ದಾಳೆ. ಸಣ್ಣಪುಟ್ಟ ಗಾಯಗಳನ್ನು ಬಿಟ್ಟರೆ ಆಕೆ ಸುರಕ್ಷಿತವಾಗಿದ್ದಾಳೆ ಎಂದು ತಿಳಿದುಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos