ನವದೆಹಲಿ, ಮೇ . 16, ನ್ಯೂಸ್ ಎಕ್ಸ್ ಪ್ರೆಸ್: ಕ್ರಿಕೆಟರ್ಸ್ ಫಿಟ್ ನೆಸ್ ಸಾಧಿಸಲು ಸಾಮಾನ್ಯವಾಗಿ ಜಿಮ್ ಮಾಡುತ್ತಾರೆ. ಗಂಟೆಗಟ್ಟಲೇ ಕಸರತ್ತು ನಡೆಸುವುದರ ಮೂಲಕ ಬೆವರು ಹರಿಸುತ್ತಾರೆ. ಆದರೆ, ಯೂನಿವರ್ಸಲ್ ಬಾಸ್ ಖ್ಯಾತಿಯ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್, ಯೋಗ ಹಾಗು ಮಸಾಜ್ ಮೊರೆ ಹೋಗಿದ್ದಾರೆ. ಯೋಗಾಭ್ಯಾಸ ಮಾಡುವುದರ ಮೂಲಕ ಇಂಗ್ಲೆಂಡ್ ನಲ್ಲಿ ನಡೆಯಲಿರೋ ವಿಶ್ವಕಪ್ ಮಹಾಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಐಪಿಎಲ್ 12ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಉತ್ತಮ ಪ್ರದರ್ಶನ ನೀಡಿದ್ದ ಗೇಲ್, ಸದ್ಯ ಉತ್ತಮ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ವಿಶ್ವಕಪ್ ಟೂರ್ನಿಯಲ್ಲೂ, ಗೇಲ್ ಅದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ