ಮಹದೇವಪುರ, ನ. 23: ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳೊಂದಿಗೆ ಯೋಗ ಆಧಾರಿತ ಚಟುವಟಿಕೆಗಳು ಈಗಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಖ್ಯಾತ ಬಾಲ ಯೋಗಾ ಪಟು ಯಶ್ವಂತ್ ತಿಳಿಸಿದರು. ಅವಲಹಳ್ಳಿ ಸಮೀಪದ ರಾಂಪುರ ಗ್ರಾಮದಲ್ಲಿರುವ ಪ್ರೇಸ್ಟೀಜ್ ಇಂಟರ್‌ನ್ಯಾಷನಲ್ ಶಾಲಾ 5 ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಿಗೆ ವಿದ್ಯಾಭ್ಯಾದಸದ ಜೊತೆಗೆ ಕ್ರೀಡಾಭ್ಯಾಸವನ್ನು ಅದರಲ್ಲೂ ಯೋಗವು ಜೀವನಶೈಲಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದರು. ಯೋಗವು ಸಾಕಷ್ಟು ಪರಿಣಾಮ ಕಾರಿಯಾಗಿದೆ, ಯೋಗದ ಮೂಲಕ ಯಾವ ರೀತಿ ಆರೋಗ್ಯವನ್ನು ನಿಯಂತ್ರಣದಲ್ಲಿಡಬಹುದು ಎಂಬುದು ಸೇರಿದಂತೆ ಯೋಗದಿಂದ ಏನೇನು ಉಪಯೋಗಗಳಿವೆ ಎಂಬುದರದ ಬಗ್ಗೆ ಪೋಷಕರಿಗೆ ತಿಳಿ ಹೇಳಿದರು ಕ್ರೀಡೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪ್ರೆಸ್ಟೇಜ್ ಶಾಲಾ ಅಧ್ಯಕ್ಷರಾದ ಕೆ. ಅಂಜಿನಪ್ಪ, ನಿರ್ದೆಶಕಿ ರಮಾದೇವಿ, ಪ್ರಾಂಶುಪಾಲರಾದ ಪೆಟ್ರೀಶಿಯಾ ಮಂಗಲ್ ರಾಜ್ ಹಾಗೂ ನ್ಯೂ ಬಾಲ್ಡ್ವಿನ್ ಶಾಲಾ ಪ್ರಾಂಶುಲಾರಾದ ನಂದಿನಿ.ಡಿ ಹಾಜರಿದ್ದರು.