ಮಳವಳ್ಳಿ, ಮಾ. 20, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯಲ್ಲಿ ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಜೆಡಿಎಸ್ ಅಭ್ಯರ್ಥಿ ನಿಖಿಲ್ಕುಮಾರಸ್ವಾಮಿ ಹೇಳಿದ್ದಾರೆ.
ತಾಲ್ಲೂಕಿನ ಹಲಗೂರು,ಹಾಡ್ಲಿ, ಬೆಳಕವಾಡಿಗೆ ಭೇಟಿ ನೀಡಿ ಮಾತಯಾಚನೆ ವೇಳೆ ಮಾತನಾಡಿದ ಅವರು, ಸುಮಲತಾ ಪರ ಯಾವುದೇ ಸ್ಟಾರ್ ನಟರು ಪ್ರಚಾರ ಮಾಡಿದರೂ ನನಗೆ ಭಯ ಇಲ್ಲ. ನನ್ನ ಪರವಾಗಿ ಮಂಡ್ಯ ಜನತೆ ಇದ್ದಾರೆ ಎಂದು ಹೇಳುವ ಮೂಲಕ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ನಡೆಸುತ್ತಿರುವ ದರ್ಶನ್ ಯಶ್ ಗೆ ಟಾಂಗ್ ನೀಡಿದರು.