“ಎಷ್ಟು ಹಿಯಾಳಿಸುತ್ತಾರೋ, ನಾನು ಅಷ್ಟೇ ಮೆರೀತೀನಿ” ಯಶ್

“ಎಷ್ಟು ಹಿಯಾಳಿಸುತ್ತಾರೋ, ನಾನು ಅಷ್ಟೇ ಮೆರೀತೀನಿ” ಯಶ್

ಮಂಡ್ಯ, ಏ. 9, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಟಾಕ್ ವಾರ್ ಹೆಚ್ಚಾಗುತ್ತಿದೆ. ಮಧ್ಯಾಹ್ನ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಟ ಯಶ್‌ಗೆ ಟಾಂಗ್ ನೀಡಿದ್ದರು. ಸಂಜೆಯಾಗುತ್ತಿದ್ದಂತೆ ರಾಕಿಂಗ್​ ಸ್ಟಾರ್​ ಪ್ರಚಾರದ ವೇಳೆ ನಿಖಿಲ್‌ಗೆ ಟಾಂಗ್ ನೀಡಿದ್ದಾರೆ. ಒಳ್ಳೆಯ ಸುವರ್ಣವಕಾಶ ಸಿಕ್ಕಿದೆ. ಸುಮಲತಾ ಅವರು ಕೆಲಸ ಮಾಡ್ತಾರೆ. ಅವರ ಜೊತೆ ನಾವು ಇರ್ತೀವಿ. ಒಂದೇ ಒಂದು ಅವಕಾಶ ಮಾಡಿಕೊಡಿ. ಕೈಮುಗಿದು ಮನವಿ ಮಾಡುತ್ತೇನೆ ಎಂದರು. ಜಿಲ್ಲೆಯಲ್ಲಿ ಸುಮಲತಾ ಅಂಬರೀಷ್​ ಪರ ಪ್ರಚಾರ ಕೈಗೊಂಡಿರುವ ನಟ ಯಶ್,​ ನನ್ನ ಎಷ್ಟು ಹಿಯಾಳಿಸುತ್ತಾರೋ, ನಾನು ಅಷ್ಟೇ ಮೆರೀತೀನಿ ಎಂದು ಜೆಡಿಎಸ್ ನಾಯಕರಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಪ್ರೀತಿಯನ್ನು ಯಾವತ್ತೂ ನನ್ನ ಸ್ವಾರ್ಥಕ್ಕೆ ಬಳಸಿಲ್ಲ. ನಾನು ಸಿನಿಮಾ ಮಾಡಿದಾಗಲೂ ನೀವು ಇಷ್ಟಪಟ್ಟು ಕೊಂಡಾಡಬೇಕು. ನಾವು ಚುನಾವಣಾ ಪ್ರಚಾರಕ್ಕೆ ಬಂದಿರೋದಕ್ಕೆ ಕೆಟ್ಟೋರಾಗಿದ್ದೀವಿ. ಆದರೆ ಮನುಷ್ಯನಿಗೆ ನಿಯತ್ತು ಬಹಳ ಮುಖ್ಯ. ನಾನು ಬೆಳೆಯುವ ಸಂದರ್ಭದಲ್ಲಿ ಅಂಬರೀಷ್ ಅವ್ರು ಬೆನ್ನಿಗೆ ನಿಂತಿದ್ರು. ಆಶೀರ್ವಾದ ಮಾಡಿದ್ರು. ಅವರ ಕುಟುಂಬಕ್ಕೆ ನಾವು ಮಕ್ಕಳೇ. ಅದನ್ನ ಯಾರಾದ್ರೂ ಟೀಕೆ ಮಾಡಿದ್ರೆ, ಯಾವನಾದ್ರೂ ಪ್ರಶ್ನೆ ಮಾಡಿದ್ರೆ ಹೆಚ್ಚು ಮಾಡ್ತೀನಿ ಎಂದು ಎಚ್ಚರಿಕೆ ನೀಡಿದರು. ಈ ಚುನಾವಣೆ ಮಂಡ್ಯದ ಸ್ವಾಭಿಮಾನದ ಪ್ರಶ್ನೆ. ಅಂಬರೀಷ್​ಣ್ಣನ ಹೆಂಡತಿ ಚುನಾವಣೆಗೆ ಸ್ಪರ್ಧೆ ಮಾಡ್ತಿದ್ದಾರೆ. ಅವರು ಚುನಾವಣೆಗೆ ಸ್ಪರ್ಧೆ ಮಾಡಿದ ತಕ್ಷಣವೇ ಕೆಟ್ಟೋರಾಗೋದ್ರಾ. ನೀವು ಕೆಲಸ ಮಾಡಿದ್ರೆ ಜನ ಖಂಡಿತಾ ಆಶೀರ್ವಾದ ಮಾಡ್ತಾರೆ. ಅದನ್ನು ಬಿಟ್ಟು ಗಂಡ ಸತ್ತೋರು ಮನೆ ಸೇರಿಕೊಳ್ಳಬೇಕು, ಮನೆಯಿಂದ ಆಚೆ ಬರಬಾರದು, ಯಾವುದೋ ಊರಿಗೆ ಸೇರಿದವರು, ಜಾತಿಗೆ ಸಂಬಂಧ ಪಟ್ಪವರು ಅಂತೆಲ್ಲ ಅನ್ನೋದು ನ್ಯಾಯವೇ. ಸುಮಲತಾ ಅವ್ರಿಗೆ ಸಹಾಯ ಮಾಡೋದಕ್ಕೆ ಬರ್ತೀವಿ ಅಂದ್ರೆ ನಾವು ಕಳ್ಳೆತ್ತು ಆಗಿಬಿಡ್ತೀವಾ ಎಂದು ಪ್ರಶ್ನೆ ಮಾಡಿದರು. ರೈತರ ಬಗ್ಗೆ ಅಭಿಮಾನ ನಮಗೂ ಇದೆ. ನನ್ನ ಎಷ್ಟು ಹಿಯಾಳಿಸುತ್ತಾರೋ, ಅಷ್ಟೇ ಮೆರೀತೀನಿ ಎಂದು ಜೆಡಿಎಸ್ ನಾಯಕರಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದರು. ಒಳ್ಳೆಯ ಸುವರ್ಣವಕಾಶ ಸಿಕ್ಕಿದೆ. ಅವರು ಕೆಲಸ ಮಾಡ್ತಾರೆ. ಅವರ ಜೊತೆ ನಾವು ಇರ್ತೀವಿ. ಒಂದೇ ಒಂದು ಅವಕಾಶ ಮಾಡಿಕೊಡಿ. ಕೈಮುಗಿದು ಮನವಿ ಮಾಡುತ್ತೇನೆ ಎಂದರು. ಮಳವಳ್ಳಿಗೆ ಆಗಮಿಸಿದ ಯಶ್ ಪ್ರಚಾರದ ವೇಳೆ ಅಭಿಮಾನಿಗಳು 500 ಕೆಜಿ ಸೇಬಿನ‌ ಬೃಹತ್ ಹಾರ ಹಾಕಿ ಅದ್ಧೂರಿ ಸ್ವಾಗತ ಕೋರಿದರು. ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತ ಕೋರಿದ ಅಭಿಮಾನಿಗಳು ಜೈಕಾರ ಹಾಕಿ ಸಂಭ್ರಮಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos