ನವದೆಹಲಿ, ಏ. 25, ನ್ಯೂಸ್ ಎಕ್ಸ್ ಪ್ರೆಸ್ : ಭಾರತೀಯ ಸೇನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲೊಂದು ನಿರ್ಮಾಣವಾಗಲಿದೆ. ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಸೇನೆಯಲ್ಲಿ ಉದ್ಯೋಗಾವಕಾಶ ನೀಡಲು ಆನ್ ಲೈನ್ ನಲ್ಲಿ ನೇಮಕಾತಿಗೆ ಅವಕಾಶ ನೀಡಲಾಗಿದೆ. ಸೈನಿಕರ ಸಾಮಾನ್ಯ ಕರ್ತವ್ಯ ನಿಭಾಯಿಸಲು ಇದುವರೆಗೆ ಮಹಿಳೆಯರಿಗೆ ಅವಕಾಶವಿರಲಿಲ್ಲ. ಸೇನಾ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಈ ಯೋಜನೆಗೆ ನಾಂದಿ ಹಾಡಿದ್ದರು. ಕೊನೆಗೂ ರಕ್ಷಣಾ ಇಲಾಖೆಯ ಸಮ್ಮತಿಯ ಮೇರೆಗೆ ಇದೀಗ ಈ ಯೋಜನೆ ಜಾರಿಗೆ ಬಂದಿದ್ದು, ಸೇನೆ ಸೇರಲು ಜೂನ್ 8 ರ ಒಳಗೆ ಮಹಿಳೆಯರು ಅರ್ಜಿ ಸಲ್ಲಿಸಬಹುದು.
1072 ಹೆಡ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ BSF joinindianarmy.nic.in ವೆಬ್ ಸೀಟ್ ಮೂಲಕ ಮಹಿಳೆಯರು ಸೇನೆಯಲ್ಲಿ ಉದ್ಯೋಗಾವಕಾಶ ಪಡೆಯಲು ಅರ್ಜಿ ಗುಜರಾಯಿಸಬಹುದಾಗಿದೆ. ಈ ಅರ್ಜಿ ತುಂಬುವ ಪ್ರಕ್ರಿಯೆ ಏಪ್ರಿಲ್ 25, 2019 ರಿಂದ ಆರಂಭವಾಗಲಿದ್ದು, ಜೂನ್ 8, 2019 ರ ಒಳಗೆ ಅರ್ಜಿಯನ್ನು ಗುಜರಾಯಿಸಬಹುದಾಗಿದೆ. ಭಾರತೀಯ ಸೇನೆಯಲ್ಲಿ 40 ತಾಂತ್ರಿಕ ಪದವಿ ಕೋರ್ಸಿಗೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯದ ಪರೀಕ್ಷೆಯನ್ನು ನಡೆಸಲಾಗುತ್ತದೆ. ಸೇನೆ ಸೇರುವ ಮಹಿಳೆಯರಿಗೆ ಇರಬೇಕಾದ ಅರ್ಹತೆಗಳು ಹೀಗಿವೆ. ವಯೋಮಿತಿ ಕನಿಷ್ಠ ವಯೋಮಿತಿ 17.5 ವರ್ಷ, ಗರಿಷ್ಠ ವಯೋಮಿತಿ 21 ವರ್ಷ ವಿದ್ಯಾರ್ಹತೆ ಶೇ.45 ಅಥವಾ ಅದಕ್ಕಿಂತ ಹೆಚ್ಚು ಅಂಕದೊಂದಿಗೆ ಎಸ್ ಎಸ್ ಎಲ್ ಸಿ ಮುಗಿಸಿರಲೇಬೇಕು. ಪ್ರತಿ ವಿಷಯದಲ್ಲೂ ಶೇ.33 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ದೈಹಿಕ ಸಾಮರ್ಥ್ಯ ಅಭ್ಯರ್ಥಿಯ ಕನಿಷ್ಠ ಎತ್ತರ 142 ಸೆ.ಮೀ. ಗಿಂತ ಹೆಚ್ಚಿರಬೇಕು. ಹೆಚ್ಚು ತೂಕ ಹೊಂದಿರಬಾರದು. ಅಗತ್ಯ ದಾಖಲೆಗಳು
* ಪ್ರವೇಶ ಪತ್ರ (Admit card)
* ಫೋಟೋ(Photograph)
* ಎನ್ ಸಿಸಿ ಸರ್ಟಿಫಿಕೇಟ್ (NCC certificate)
* ಧರ್ಮ ಪ್ರಮಾಣಪತ್ರ (Religion certificate)
* ಶಿಕ್ಷಣ ಪ್ರಮಾಣಪತ್ರ (Education certificate)
* ವಾಸ್ತವ್ಯ ಪ್ರಮಾಣಪತ್ರ (Domicile certificate)
* ಜಾತಿ ಅಥವಾ ಪಂಗಡ ಪ್ರಮಾಣ ಪತ್ರ(Class or caste certificate)
* ನಡತೆ ಪ್ರಮಾಣಪತ್ರ(Character certificate)
* ಸಂಬಂಧದ ಪ್ರಮಾಣಪತ್ರ(Relationship certificate)
* ಶಾಲೆಯಿಂದ ನಡತೆ ಪ್ರಮಾಣಪತ್ರ(School character certificate)