ಗುಜರಾತ್, ಏ. 8, ನ್ಯೂಸ್ ಎಕ್ಸ್ ಪ್ರೆಸ್: ಗುಜರಾತಿನಲ್ಲಿ ನಾಚಿಕೆಗೇಡಿ ಕೆಲಸ ಮಾಡಿದ್ದ ಪತಿ ವಿರುದ್ಧ ಪತ್ನಿ ದೂರು ನೀಡಿದ್ದಾಳೆ. ಪತಿ ಮಾಡಿದ ಕೆಲಸ ಕೇಳಿದ್ರೆ ಎಲ್ಲರೂ ದಂಗಾಗ್ತಾರೆ. ಮಾಹಿತಿ ಪ್ರಕಾರ, ಪತ್ನಿಗೆ ಅಶ್ಲೀಲ ಚಿತ್ರ ತೋರಿಸಿದ ಪತಿ, ಸ್ನೇಹಿತರ ಜೊತೆ ಮಲಗುವಂತೆ ಒತ್ತಾಯ ಮಾಡಿದ್ದಾನೆ. 2015ರಲ್ಲಿ ಪೀಡಿತೆಯೊಂದಿಗೆ ಮದುವೆ ನಡೆದಿತ್ತಂತೆ. ಕೆಲ ದಿನಗಳ ಹಿಂದೆ ಪತಿ ಸ್ನೇಹಿತರ ಜೊತೆ ಮನಾಲಿಗೆ ಕರೆದೊಯ್ದಿದ್ದನಂತೆ. ಈ ವೇಳೆ ಪತ್ನಿಗೆ ಅಶ್ಲೀಲ ಚಿತ್ರ ತೋರಿಸಿದ್ದಲ್ಲದೆ ಸ್ನೇಹಿತರ ಜೊತೆ ಮಲಗುವಂತೆ ಒತ್ತಾಯಿಸಿದ್ದಾನಂತೆ. ಇದಕ್ಕೆ ಪತ್ನಿ ವಿರೋಧ ಮಾಡ್ತಿದ್ದಂತೆ ಹಲ್ಲೆ ನಡೆಸಿದ್ದಾನೆ. ಅತ್ತೆ-ಮಾವನಿಗೆ ವಿಷ್ಯ ಹೇಳಿದ್ರೆ ಅವ್ರೂ ಮಗನ ಪರ ಮಾತನಾಡಿದ್ದಾರಂತೆ. ಮನಾಲಿಯಲ್ಲಿ ಸ್ನೇಹಿತರ ಮುಂದೆಯೇ ವೈಫ್ ಸ್ವಾಪಿಂಗ್ ಬಗ್ಗೆ ಮಾತನಾಡಿದ್ದ ಪತಿ ಮನೆಗೆ ಬಂದ್ಮೇಲೆ ವರಸೆ ಬದಲಿಸಿದ್ದನಂತೆ. ನಶೆ ಪದಾರ್ಥ ನೀಡಿ ಪತ್ನಿ ಅಶ್ಲೀಲ ಫೋಟೋ ತೆಗೆದು ಸ್ನೇಹಿತರಿಂದ ಕೆಟ್ಟ ಮಾತುಗಳನ್ನಾಡಿಸಿ ತಲಾಕ್ ನೀಡುವುದಾಗಿ ಹೇಳುತ್ತಿದ್ದಾನಂತೆ. ಪೀಡಿತೆಯನ್ನು ಮನೆಯಿಂದ ಹೊರ ಹಾಕಿದ್ದಾನಂತೆ. ಸದ್ಯ ಪ್ರಕರಣ ವಿಚಾರಣೆ ಹಂತದಲ್ಲಿದೆ.