ಹೊಸಕೋಟೆ, ನ. 18: ಮಾಜಿ ಸಿಎಂ ಸಿದ್ದರಾಮಯ್ಯ ಉಪಚುನಾವಣೆಯಲ್ಲಿ ನಾನು ಲೆಕ್ಕಕ್ಕೇ ಇಲ್ಲ ಎಂದಿದ್ದಾರೆ. ಫಲಿತಾಂಶದ ದಿನ ಯಾರು ಲೆಕಕ್ಕೆ ಇಲ್ಲ ಅಂತಾ ತಿಳಿಯುತ್ತೆ. ಮೂರನೇ ಸ್ಥಾನಕ್ಕೆ ಯಾರು ಹೋಗ್ತಾರೆನೋಡೋಣ. ನಾನು ಮೋಸಗಾರ, ಮನೆಮುರುಕ ಅಲ್ಲ. ಕ್ಷೇತ್ರದ ಅಭಿವೃದ್ಧಿ ಹಾಗೂ ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡಿ ಚುನಾವಣೆ ಎದುರಿಸಿತ್ತಿದ್ದೇನೆ. ಜನ ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ.