‘ವೈಟ್ ಟಾಪಿಂಗ್’ ಎಂಬ ಕಳಪೆ ಕಾಮಗಾರಿಗಳ ಕರ್ಮಕಾಂಡ!

‘ವೈಟ್ ಟಾಪಿಂಗ್’ ಎಂಬ ಕಳಪೆ ಕಾಮಗಾರಿಗಳ ಕರ್ಮಕಾಂಡ!

ಬೆಂಗಳೂರು, ಮೇ.9, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರಿನಲ್ಲಿ ವೈಟ್ ಟಾಪಿಂಗ್ ರಸ್ತೆ ಬಗ್ಗೆ ಪದೇ ಪದೇ ಇದು ದುಡ್ ಮಾಡೋ ಸ್ಕೀಂ, ಇದ್ರಲ್ಲಿ ಹಗರಣ ನಡೆದಿದೆ ಅಂತ ಆರೋಪಿಸ್ತಾನೆ ಇದ್ರು. ಆದ್ರೆ ವೈಟ್ ಟಾಪಿಂಗ್ ಕಾಮಗಾರಿ ವಿಷ್ಯ ನೋಡಿದ್ರೆ ಗುಣಮಟ್ಟ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳು ಕಾಂಪ್ರಮೈಸ್ ಆಗಿರೋದು ತಿಳಿದು ಬಂದಿದೆ. ಹೆಚ್ಚೂಕಡಿಮೆ ಸಾವಿರ ಕೋಟಿ ರೂ ವೆಚ್ಚದಲ್ಲಿ ಸರಕಾರ ಕೈಗೊಂಡಿರುವ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಯೋಜನೆ ಬಗ್ಗೆ ಮೊದಲಿಂದಲೂ ಅಪಸ್ವರಗಳು ಕೇಳಿಬರುತ್ತಲೇ ಇವೆ. ಇದು ದೊಡ್ಡ ಮಾಡುವ ಸ್ಕೀಮ್ ಎಂಬ ಆರೋಪಗಳಿವೆ. ವರ್ಷದ ಹಿಂದಷ್ಟೇ ವೈಟ್ ಟಾಪಿಂಗ್ ಕಂಡಿದ್ದ ಮೈಸೂರು ರಸ್ತೆಯಲ್ಲಿ 8 ಅಡಿಯಷ್ಟು ಭಾಗವು 4 ಇಂಚು ಕುಸಿದಿದೆ. ಇದರೊಂದಿಗೆ, ವೈಟ್ ಟಾಪಿಂಗ್​ನಲ್ಲಿ ಕಳಪೆ ಕಾಮಗಾರಿ ನಡೆದಿದೆ ಎನ್ನುವ ಆರೋಪಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ. ಕೆ.ಆರ್. ಮಾರ್ಕೆಟ್​ನಿಂದ ಬಿಎಚ್​ಇಎಲ್ ಸರ್ಕಲ್ ತನಕದ ಮೈಸೂರು ರಸ್ತೆಯ 4.8 ಕಿಲೋ ಮೀಟರ್ ಉದ್ದದ ಒಂದು ಬದಿಗೆ ವೈಟ್ ಟಾಪಿಂಗ್ ಕಾಮಗಾರಿ 2018ರ ಏಪ್ರಿಲ್​ನಲ್ಲಿ ಮುಗಿದಿತ್ತು. ಸುಮಾರು 25 ರಿಂದ 30 ವರ್ಷ ಬಾಳಿಕೆ ಬರಬೇಕಿದ್ದ ಈ ರಸ್ತೆಯ ಒಂದು ಭಾಗವು ಒಂದೇ ವರ್ಷಕ್ಕೆ ಕುಸಿದಿದೆ. ಬಾಪೂಜಿನಗರ ಪ್ರವೇಶದ್ವಾರದ ಬಳಿ ರಸ್ತೆ ಕುಸಿದು, ವೈಟ್ ಟಾಪಿಂಗ್ ಮೇಲ್ಭಾಗದಲ್ಲಿ ದೊಡ್ಡ ಬಿರುಕು ಕಂಡು ಬಂದಿದೆ.

ಇದು ನಗರದಲ್ಲಿ ನಡೆಯುತ್ತಿರುವ 972 ಕೋಟಿ ರೂಪಾಯಿ ವೆಚ್ಚದ ವೈಟ್ ಟಾಪಿಂಗ್ ಕಾಮಗಾರಿ ಗುಣಮಟ್ಟದ ಮೇಲೆಯೇ ಸಂಶಯ ಮೂಡುವಂತೆ ಮಾಡಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ. ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ. ವೈಟ್ ಟಾಪಿಂಗ್ ಕಾಮಗಾರಿಯ ಗುಣಮಟ್ಟದ ಬಗ್ಗೆ ರಸ್ತೆ ಮತ್ತು ಮೂಲಭೂತ ಸೌಕರ್ಯದ ತಜ್ಞರಾದ ಪ್ರೊಫೆಸರ್ ಶ್ರೀಹರಿ ಅನುಮಾನ ವ್ಯಕ್ತಪಡಿಸಿದ್ದಾರೆ. ವೈಟ್ ಟಾಪಿಂಗ್ ರಸ್ತೆಯ ಅಂಚಿನಲ್ಲಿ ನೀರು ಮತ್ತಿತರ ಪೈಪ್​ಗಳನ್ನು ಅಳವಡಿಸಬೇಕು. ಒಂದೊಮ್ಮೆ ಪೈಪ್ ಹಾಳಾದ್ರೆ ಬದಲಾಯಿಸಲು ರಸ್ತೆ ಬದಿಯಲ್ಲಿ ಕಾಬಲ್ ಸ್ಟೋನ್ ಅಳವಡಿಸುತ್ತಾರೆ. ಆದ್ರೆ ವೈಟ್ ಟಾಪಿಂಗ್ ಹಾಕಿದ ಮೈಸೂರು ರಸ್ತೆಯಲ್ಲಿ ರಸ್ತೆ ಮಧ್ಯೆ ಪೈಪ್ ಅಳವಡಿಸಿರೋದು ತಪ್ಪು. ಹೀಗಾಗಿಯೇ ಪೈಪ್ ಬದಿಯ ಮಣ್ಣು ಕುಸಿದು ವೈಟ್ ಟಾಪಿಂಗ್ ರಸ್ತೆ ಮೇಲ್ಭಾಗದಲ್ಲಿ ಬಿರುಕು ಬಂದಿದೆ. ಕಾಂಕ್ರಿಟ್ ಮಿಕ್ಸಿಂಗ್, ಕ್ಯೂರಿಂಗ್​ನಲ್ಲಿ ದೋಷವೂ ಕಾರಣವಿರಬಹುದು. ಇದು ಕಳಪೆ ಕಾಮಗಾರಿಗೆ ಸಾಕ್ಷಿ ಎಂದು ರಸ್ತೆ ಮತ್ತು ಮೂಲಭೂತ ಸೌಕರ್ಯ ತಜ್ಞ ಪ್ರೊಫೆಸರ್ ಶ್ರೀಹರಿ ಅಭಿಪ್ರಾಯಪಡುತ್ತಾರೆ. ನಗರದ ಒಟ್ಟು 30 ರಸ್ತೆಗಳಲ್ಲಿ 93.5 ಕಿಲೋ ಮೀಟರ್ ಉದ್ದದ ವೈಟ್ ಟಾಪಿಂಗ್ ಹಾಕುವ ರಸ್ತೆ ಕಾಮಗಾರಿ 2017ರಿಂದ ಬೇರೆ ಬೇರೆ ಅವಧಿಯಲ್ಲಿ ಪ್ರಾರಂಭವಾಗಿದೆ. 2 ಪ್ಯಾಕೇಜ್​ಗಳಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಈತನಕ ಒಟ್ಟು 28 ಕಿಲೋ ಮೀಟರ್ ಉದ್ದದ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಇದಕ್ಕಾಗಿ 230 ರಿಂದ 240 ಕೋಟಿ ರೂಪಾಯಿ ಹಣವನ್ನು ಬಿಬಿಎಂಪಿ ಖರ್ಚು ಮಾಡಿದೆ ಅಂತ ಹೇಳ್ತಾರೆ ಮೇಯರ್ ಗಂಗಾಂಬಿಕೆ. ಮೈಸೂರು ರೋಡ್ ವೈಟ್ ಟಾಪಿಂಗ್ ರಸ್ತೆ ಕುಸಿತದ ಬಗ್ಗೆ ಕೇಳಿದ್ರೆ, ಈ ಬಗ್ಗೆ ಎಂಜಿನಿಯರ್ ಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ತೀನಿ ಎಂದು ಮೇಯರ್ ಪ್ರತಿಕ್ರಿಯೆ ನೀಡುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos