ಮರಳಿ ಬಾ ಶಾಲೆಗೆ

  • In State
  • August 24, 2021
  • 240 Views
ಮರಳಿ ಬಾ ಶಾಲೆಗೆ

ಹಾನಗಲ್ : ಪಟ್ಟಣದ ಶ್ರೀ ಕುಮಾರೇಶ್ವರ ಪ್ರೌಢಶಾಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಸಾಮಾಜಿಕ ಜಾಲತಾಣ, ಮಾಹಿತಿ ತಂತ್ರಜ್ಞಾನ ಪ್ರಕೋಷ್ಟ ಹಾನಗಲ್ ಮಂಡಳ ಆಯೋಜಿಸಿದ “ಮರಳಿ ಬಾ ಶಾಲೆಗೆ” ಸ್ವಾಗತ ಸಮಾರಂಭವನ್ನು ಸೋಮವಾರ ಆಯೋಜಿಸಿದ್ದರು.

ವಿದ್ಯಾರ್ಥಿಗಳು ಆತಂಕವಿಲ್ಲದೆ ಶಾಲೆಗಳಿಗೆ ಬನ್ನಿ. ಭಯ ಬೇಡ ಸರಕಾರ ನಿಮ್ಮೊಂದಿಗಿದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುವುದು. ಆರೋಗ್ಯದ ಜತೆಗೆ ಕಲಿಕೆಯೂ ಅತಿ ಮುಖ್ಯ. ಕಲಿಕೆಯ ಅಂತರ ಹೆಚ್ಚಾದಂತೆ ಜ್ಞಾನಾರ್ಜನೆ ಕಷ್ಟವಾಗುತ್ತದೆ. ತಜ್ಞರ ಸಲಹೆಯಂತೆ ಎಲ್ಲಾರೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೋಜರಾಜ ಕರೂದಿ ತಿಳಿಸಿದರು.

ಬಿಜೆಪಿ ಹಾನಗಲ್ ಮಂಡಲದ ಅಧ್ಯಕ್ಷ ನಿಂಗಪ್ಪ ಗೊಬ್ಬೇರ ಮಾತನಾಡಿ ‘ಕಲಿಕೆ ನಿರಂತರವಾಗಿದ್ದರೆ ಜ್ಞಾನಾರ್ಜನೆ ಸುಲಭ. ಆದರೆ ಅಂತರ ಹೆಚ್ಚಾದರೆ ಕಷ್ಟ ಸಾಧ್ಯ. ವಿದ್ಯಾರ್ಥಿಗಳು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಮ್ಮೆಲ್ಲರ ಆರೋಗ್ಯದ ಸುರಕ್ಷತೆಗೆ ಮೊದಲ ಆದ್ಯತೆಕೋಡಿ’ ಎಂದು ಹೇಳಿದ್ದಾರೆ.

ಈ ವೇಳೆ ಭಾರತೀಯ ಜನತಾ ಪಾರ್ಟಿ ಸಾಮಾಜಿಕ ಜಾಲತಾಣ, ಮಾಹಿತಿ ತಂತ್ರಜ್ಞಾನ ಪ್ರಕೋಷ್ಟ ವತಿಯಿಂದ ಮಾಸ್ಕ್, ಸ್ಯಾನಿಟೈಜರ್ ವಿತರಿಸಿದರು. ಬಿಜೆಪಿ ತಾಲೂಕು ಕಾರ್ಯದರ್ಶಿ ಶಿವಲಿಂಗಪ್ಪ ತಲ್ಲೂರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಸಂತೋಷ ಟೀಕೋಜಿ, ಮಂಜುನಾಥ ಬಸವಂತಕರ, ಅಮೋಘ ಕುಲಾಲ, ಪ್ರಶಾಂತ ಗೊಂದಿ, ಮುಖ್ಯೋಪಾಧ್ಯಾಯ ಸಿ.ಎಸ್.ವಸ್ತ್ರದ, , ಶಿಕ್ಷಕರು ಇನ್ನಿತರರಿದರು.

ಫ್ರೆಶ್ ನ್ಯೂಸ್

Latest Posts

Featured Videos