ಕೆ.ಆರ್.ಪುರ, ಡಿ. 05: ರಾಜ್ಯದಲ್ಲಿ ಇಂದು 15 ಕ್ಷೇತ್ರಗಳಲ್ಲಿ ಉಪ ಚುನಾವಣೆಯ ಸಮರ ನಡೆಯುತ್ತಿದ್ದು, ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದ ಕಲ್ಕೆರೆಯಲ್ಲಿ ನೂರು ವರ್ಷದ ಅಜ್ಜಿಯೊಬ್ಬರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎನ್ನುವ ಹಂಬಲದಲ್ಲಿ ತಮ್ಮ ಮಕ್ಕಳ ಸಹಾಯದಿಂದ ಮತದಾನದ ಹಕ್ಕನ್ನ ಚಲಾಯಿಸಲು ಬಂದಿದ್ದಾರೆ.
ಬೆಳಿಗ್ಗೆ ಕೊರೆಯುವ ಚಳಿಯಲ್ಲಿ ನಡುಗುತ್ತಲೇ ಬಂದು ಮತ ಚಲಾಯಿಸಿದ ಸಲ್ಲಮ್ಮ. ಕಲ್ಕೆರೆ ಸರ್ಕಾರಿ ಶಾಲೆಯ ಬೂತ್ ನಂಬರ್ 32ರಲ್ಲಿ ಹಕ್ಕು ಚಲಾಯಿಸಿದ ಶತಾಯುಷಿ ಸಲ್ಲಮ್ಮ.