ಇಟಾನಗರ, ಜೂನ್.6, ನ್ಯೂಸ್ ಎಕ್ಸ್ ಪ್ರೆಸ್ : ಭಾರತೀಯ ವಾಯುಪಡೆಗೆ ಸೇರಿದ್ದ ರಷ್ಯಾ ನಿರ್ಮಿತ “ಸಿ-130 ಜೆ” ಮಾದರಿಯ ವಿಮಾನ ನಾಪತ್ತೆಯಾಗಿದ್ದು ಈವರೆಗೂ ಪತ್ತೆಯಾಗಿಲ್ಲ. ಐಎಎಫ್ ವಿಮಾನದಲ್ಲಿ 8 ಸಿಬ್ಬಂದಿ ಹಾಗೂ 5 ಪ್ರಯಾಣಿಕರಿದ್ದರು. ಏತನ್ಮಧ್ಯೆ ನಾಪತ್ತೆಯಾಗಿದ್ದ ಐಎಎಫ್ ಎಎನ್ 32ನಲ್ಲಿ ಪಂಜಾಬ್ ನ ಲೆಫ್ಟಿನೆಂಟ್ ಮೋಹಿತ್ ಗರ್ಗ್ ಗಾಗಿ ತಂದೆ ಹುಡುಕಾಟದಲ್ಲಿದ್ದರೆ, ತಾಯಿಗೆ ತನ್ನ ಮಗ ಕಾಣೆಯಾಗಿರುವ ವಿಷಯ ತಿಳಿದಿಲ್ಲ ಎಂಬುದಾಗಿ ವರದಿಯೊಂದು ತಿಳಿಸಿದೆ.
ನಾಪತ್ತೆಯಾಗಿದ್ದ 13ಮಂದಿಯಲ್ಲಿ ಐಎಎಫ್ ನ ಲೆಫ್ಟಿನೆಂಟ್ ಮೋಹಿತ್ ಗರ್ಗ್ (27ವರ್ಷ) ಕೂಡಾ ಒಬ್ಬರಾಗಿದ್ದಾರೆ. ಗರ್ಗ್ ಸೇರಿದಂತೆ ಎಲ್ಲರೂ ಸುರಕ್ಷಿತವಾಗಿ ವಾಪಸ್ ಬರಲಿ ಎಂಬುದಾಗಿ ಪಂಜಾಬ್ ನ ಪಟಿಯಾಲಾ ಜಿಲ್ಲೆಯ ಸಾಮ್ನಾ ನಗರದ ಗರ್ಗ್ ಕುಟುಂಬ ಪ್ರಾರ್ಥಿಸುತ್ತಿದೆ.
ಎಲ್ಲೆಡೆ ಹುಡುಕಾಡ ನಡೆಸುತ್ತಿದ್ದಾರೆ..ಆದರೆ ಯಾವ ಸುಳಿವು, ಮಾಹಿತಿಯೂ ಸಿಕ್ಕಿಲ್ಲ. ನನಗೆ ನನ್ನ ಮಗ ಸೇರಿದಂತೆ ನಾಪತ್ತೆಯಾದವರು ಮರಳಿ ಸಿಗಲಿ ಎಂಬುದೇ ಹಾರೈಕೆಯಾಗಿದೆ ಎಂದು ಮೋಹಿತ್ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.