ಸಿಲಿಕಾನ್ ಸಿಟಿಗೆ ವಿಕೃತ ಕಾಮಿ ಎಂಟ್ರಿ..!

ಸಿಲಿಕಾನ್ ಸಿಟಿಗೆ ವಿಕೃತ ಕಾಮಿ ಎಂಟ್ರಿ..!

ಬೆಂಗಳೂರು, ನ. 23 : ನಗರದಲ್ಲಿ ಮತ್ತೊಬ್ಬ ವಿಕೃತ ಕಾಮಿ ಕಾಣಿಸಿಕೊಂಡಿದ್ದಾನೆ. ಮತ್ತೆ ವಿಕೃತ ಕಾಮಿ ಉಮೇಶ್ರೆಡ್ಡಿ ನಗರಕ್ಕೆ ಎಂಟ್ರಿ ಪಡೆದಿದ್ದಾನೆಯೇ ಎಂದು ಗಾಬರಿಯಾಗಬೇಡಿ. ಈತ ಮತ್ತೊಬ್ಬ ವಿಕೃತ ಕಾಮಿ.ಎಂಬಿಎ ಪದವೀಧರನಾಗಿರುವ ಈ ಕಾಮಿ ಸ್ಕೋಡಾ ಕಾರು ಬಳಕೆ ಮಾಡುತ್ತಿದ್ದು, ತನ್ನನ್ನು ಶಾಸಕರ ಮಗನೆಂದು ನಂಬಿಸಿ ಅಮಾಯಕ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ತಲೆಮರೆಸಿಕೊಳ್ಳುತ್ತಿದ್ದ.
ತಮಿಳುನಾಡಿನ ತಿರುಚಿ ಜಿಲ್ಲೆಯ ವೀರೇಶ್ವರಂನ ನಿವಾಸಿ ಕಾರ್ತಿಕ್ರೆಡ್ಡಿಯೇ ಅಮಾಯಕ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಇದೀಗ ಹಲಸೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಇದುವರೆಗೂ ಮೂವರು ಯುವತಿಯರ ಮೇಲೆ ಅತ್ಯಾಚಾರ ನಡೆಸಿ ಮತ್ತೆ ಮೂವರು ಯುವತಿಯರ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ಆರೋಪಕ್ಕೆ ಗುರಿಯಾಗಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos