ವಿಜಯಪುರ , ಮೇ.14,ನ್ಯೂಸ್ ಎಕ್ಸ್ ಪ್ರೆಸ್ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಜೆಪಿ ಮುಖಂಡ ಈಶ್ವರಪ್ಪನವರು ಚಾಟಿ ಬಿಸಿದ್ದಾರೆ. ‘ಸಿದ್ದರಾಮಯ್ಯಗೆ ಸಿಎಂ ಹುಚ್ಚು ಹಿಡಿದಿದೆ. ಈ ಹುಚ್ಚು ಬಿಡಿಸಲು ಬೀರೇಶ್ವರ ದೇವರು ನಿಂದಲೂ ಸಾಧ್ಯವಿಲ್ಲ. ಹೇಗಾದರೂ ಮಾಡಿ ಅವರಿಗೆ ಚಿಕಿತ್ಸೆ ಕೊಡಿಸಿ ಎಂದು ಕಲಬುರಗಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಖರ್ಗೆ ಅವರಿಗೆ ಮನವಿ ಮಾಡಿ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ಕುರಿತಾದ ವ್ಯಂಗ್ಯ, ಸಿಟ್ಟು, ಸೆಡವುಗಳೆಲ್ಲವನ್ನೂ ಒಟ್ಟಿಗೆ ಹೊರಹಾಕಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ ಅವರು ಸಿದ್ದರಾಮಯ್ಯ ಅವರಿಗೆ ಬುದ್ಧಿ ಕೊಡಲಿ ಎಂದಿದ್ದಾರೆ.ಅದು ಅಸಾಧ್ಯ. ಸಿದ್ದರಾಮಯ್ಯಗೆ ಬುದ್ಧಿ ಕೊಡಲು ಬೀರೇಶ್ವರನಿಗೂ ಸಾಧ್ಯವಿಲ್ಲ ಎಂದು ಸೋಮವಾರ ಶಿವಣಗಿಯ ಮರಡಿಸಿದ್ಧೇಶ್ವರ ಜಾತ್ರೆಯಲ್ಲಿ ಭಾಗವಹಿಸುವ ಮುನ್ನ ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು