ಪಾವಗಡ, ಫೆ. 12: ಪಟ್ಟಣದ ತುಮಕೂರು ರಸ್ತೆಯಲ್ಲಿರುವ ಎಸ್.ಎಸ್.ಕೆ ಪಿ ಯು ಕಾಲೇಜ್ ಸಮೀಪ ಬೆಳಗಿನ ಜಾವ ಹೆಣ್ಣು ಕರಡಿಯೊಂದು ರಸ್ತೆ ದಾಟುವ ಸಮಯದಲ್ಲಿ ಅಪರಿಚಿ ತವಾಹನ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕರಡಿಯ ಬೆನ್ನು ಮತ್ತು ಎರಡು ಕಾಲುಗಳ ಭಾಗಕ್ಕೆ ತೀವ್ರ ಗಾಯಗೊಂಡಿದ್ದು, ನಡೆದಾಡಲು ಸಾಧ್ಯವಾಗದೆ ರಸ್ತೆ ಪಕ್ಕದಲ್ಲಿ ಕುಳಿತುಕೊಂಡಿದ್ದು, ಇನ್ನು ಬೆಳಗಿನ ಜಾವ ವಾಕಿಂಗ್ ಗೆ ಹೋದಂತಹ ಸಾರ್ವಜನಿಕರು ಕರಡಿಯನ್ನು ಕಂಡು ಗಾಬರಿಗೊಂಡರು ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ನಂತರ ಅರಣ್ಯ ಇಲಾಖೆಗೆ ಸ್ಥಳಕ್ಕೆ ಭೇಟಿ ನೀಡಿ ಒಂದು ಗಂಟೆ ಕಾರ್ಯಾಚರಣೆಯನ್ನು ನಡೆಸಿ ಅರವಳಿಕೆ ಮದ್ದು ನೀಡಿ ಕರಡಿಗೆ ಚಿಕಿತ್ಸೆಯನ್ನು ನೀಡಲು ಮುಂದಾದರು.
ಇನ್ನು ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮಧುಗಿರಿ ಉಪವಿಭಾಗ ಶ್ರೀನಿವಾಸ್. ಡಾಕ್ಟರ್ ಮುರಳಿ ಹಿರಿಯ ಪಶುವೈದ್ಯಾಧಿಕಾರಿಗಳು ಹಾಸನ ವೃತ್ತ. ಎಚ್ ಎನ್ ಸುರೇಶ್ ವಲಯದ ವಲಯ ಅರಣ್ಯಾಧಿಕಾರಿಗಳು ಪಾವಗಡ. ಬಸವರಾಜ್ ಡಿಆರ್ ಎಫ್ ಒ. ಸಿಬ್ಬಂದಿ ವರ್ಗದವರಾರ ಕಿಷ್ಟಪ್ಪ ಸಿದ್ದಪ್ಪ ವೆಂಕಟೇಶ ಧನಂಜಯ ಕೇಶವ ಗಂಗಾರಾಜ್ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.