ಕಥುವಾ, ನ. 5 : ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ನ ಹಣ ತುಂಬಿದ್ದ ವ್ಯಾನ್ ಒಂದು 500 ಮೀಟರ್ ಕಣಿವೆಗೆ ಬಿದ್ದು ನಾಲ್ವರು ಮೃತಪಟ್ಟ ಘಟನೆ ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಬನಿಯಲ್ಲಿ ನಡೆದಿದೆ.
ಸೋಮವಾರ ರಾತ್ರಿ ಸುಮಾರು ಒಂದು ಕೋಟಿ ಹಣ ತುಂಬಿದ್ದ ವ್ಯಾನ್ ಕಥುವಾದಿಂದ ಬನಿಗೆ ಹೊರಟಿತ್ತು. ಬನಿ ನಗರಕ್ಕೆ 18 ಕಿ.ಮೀ ದೂರದಲ್ಲಿ ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ವ್ಯಾನ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.