ಮಾ, 23, ನ್ಯೂಸ್ ಎಕ್ಸ್ ಪ್ರೆಸ್: ಗೃಹ ನಿರ್ಮಾಣಕ್ಕಿಂತ ಪೂರ್ವದಲ್ಲಿ ನಿಮ್ಮ ಇಷ್ಟದಂತೆ ಉದ್ದಗಲಗಳನ್ನು ಹೊಂದಿದ ನಿವೇಶನದ ಆಯ್ಕೆ ಬಹು ಮುಖ್ಯವಾದ ಸಂಗತಿ ವಾಸ್ತುಶಾಸ್ತ್ರವು ನಿವೇಶನದ ಆಯ್ಕೆಗೆ ಪ್ರಾಮುಖ್ಯತೆ ನೀಡಿ ಕೆಲವು ಸೂತ್ರಗಳನ್ನು ರೂಪಿಸಿದೆ ಈ ಸೂತ್ರಗಳನ್ನು ಕೆಳಗೆ ವಿವರಿಸಲಾಗಿದೆ.
ನಿಮ್ಮ ಅಗತ್ಯಕ್ಕೆ ಮತ್ತು ಇಚ್ಛೆಗೆ ತಕ್ಕಂತೆ ನಿಮ್ಮ ಸಂಪನ್ಮೂಲಗಳೊಳಗ ಒಂದು ನಿವೇಶನ ಖರೀದಿಸುವುದು ಈಗಿನ ದಿನಮಾನಗಳಲ್ಲಿ ತೊಂದರೆದಾಯಕವಾಗಿದೆ ಈ ಬಾಬ್ತಿಗಾಗಿ ನೀವು ಸಾಲ ಸೂಲ ಮಾಡಬೇಕಾಗಿ ಬರಬಹುದು ಆದ್ದರಿಂದ ನಿವೇಶನ ಖರೀದಿ ಪೂರ್ವದಲ್ಲಿಯೇ ಕೆಲವು ಸಂಗತಿಗಳನ್ನು ಪೂರ್ವಾಪರ ವಿಚಾರಿಸಿ ಹೆಜ್ಜೆ ಮುಂದೂಡುವುದು ಸೂಕ್ತ, ನೀವು ಖರೀದಿಸಬಯಸಿದ ನಿವೇಶನ ನಿಮ್ಮ ಜನ್ಮಲಗ್ನಕ್ಕೆ ಮತ್ತು ಜನ್ಮರಾಶಿಗೆ ಸರಿ ಹೊಂದುವ ಓಂ ಬರುತ್ತಿದೆಯೋ ಇಲ್ಲವೋ ಎಂಬ ಸಂಗತಿಯನ್ನು ಜ್ಯೋತಿಷಿಗಳ ಶಾಸ್ತ್ರಜ್ಞರು ಬಳಿ ವಿಚಾರಿಸಿಕೊಳ್ಳುವುದು ಒಳಿತು ಏಕೆಂದರೆ ಕಟ್ಟಡ ಕಟ್ಟಿಸಿ ಅದರಲ್ಲಿ ವಾಸ ತೊಡಗಿದ ನಂತರ ಕೂಡ ಈ ಮನೆಗೆ ಓಂ ಬಂದಿಲ್ಲ ಎಂಬ ಅಭಿಪ್ರಾಯ ಸಾಮಾನ್ಯವಾಗಿದೆ ವ್ಯಕ್ತವಾಗುತ್ತದೆ ಆದ್ದರಿಂದ ಈ ಸಂಗತಿಗಳನ್ನು ಮೊದಲೇ ಖಚಿತಪಡಿಸಿಕೊಳ್ಳುವುದು ವಾಸಿ.
ನೀವು ಆಯ್ಕೆ ಮಾಡಿದ ನಿವೇಶನ ಎರೆಮಣ್ಣು (ಕಪ್ಪು) ಅಥವಾ ಜೇಡಿ ಮಣ್ಣಿನದಾಗಿರಬಹುದು. ಹಳೆಯ ಸ್ಮಶಾನ ಬಂಡೆಗಲ್ಲು ಮತ್ತು ನೀರಿನ ಝರಿಇಂದ ಉಂಟಾದ ಕೊರಕಲುಗಳನ್ನುಳ್ಳ ನಿವೇಶನ ಖರೀದಿಸಲುಬಾರದು. ನಿವೇಶನದಲ್ಲಿ ಸುಲಭವಾಗಿ ನೀರು ದೊರೆಯುವಂತಿರಬೇಕು. ಬಹಳ ಆಳಕ್ಕೆ ಬೇರುಗಳನ್ನು ಬಿಟ್ಟಂತಹ ಬೃಹತ್ ಮರಗಳು ಅಂದರೆ ಬೇವು, ಮಾವು, ಆಲ ಮುಂತಾದ ಮರಗಳಿದ್ದ ನಿವೇಶನವನ್ನು ಖರೀದಿಸಬಾರದು. ನಿವೇಶನ ಚೌಕಾಕಾರವಾಗಿದ್ದು ಉತ್ತರ ಮತ್ತು ಈಶಾನ್ಯ ದಿಕ್ಕುಗಳ ಕಡೆಗೆ ಇಳಿಜಾರಾಗಿರಬೇಕು. ಐದು ಮೂಲೆಗಳನ್ನು ಹೊಂದಿರುವ ನಿವೇಶನವನ್ನು ಖರೀದಿಸಬಾರದು. ಅಂದರೆ ಮೂರು ಮೂಲೆಯ ನಿವೇಶನವು ಒಳ್ಳೆಯದಲ್ಲ.