ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವ್ಯಾಪಾರಿಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವ್ಯಾಪಾರಿಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್

ಕೆ.ಆರ್.ಮಾರುಕಟ್ಟೆ,ಆ. 8: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವ್ಯಾಪಾರಿಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್ ,ಬೆಳಿಗ್ಗೆ ಆರು ಗಂಟೆಯಿಂದಲೇ ಹಬ್ಬಕ್ಕೆ ಬೇಕಾದ ಪೂಜಾ ಸಾಮಗ್ರಿ ಕೊಳ್ಳಲು ಹೋಗಿ ಬರುತ್ತಿರವುದು ಸರ್ವೇ ಸಾಮಾನ್ಯವಾಗಿದೆ.

ಹೂವು‌ ಹಣ್ಣು ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ಕಾಲಿಡಲಾಗದಷ್ಟು ಜನಸಾಗರ ಹರಿದು ಬರುತ್ತಿದೆ.

ನಾಳೆ ವರಮಹಾಲಕ್ಷ್ಮಿಹಬ್ಬಕ್ಕೆ ಬೇಕಾದ ಹೂವು, ಹಣ್ಣು ,ಬಾಳೆ ಕಂದುಗಳು ಕೇದಿಗೆ ಗರಿಗಳು ಲೋಡುಗಟ್ಟಲೇ ತಂದು ಮಾರಾಟಕ್ಕಿಡಲಾಗಿದೆ. ಸಾಮಾನ್ಯ ದಿನಗಳಲ್ಲಿ ಇರುವ ವಹಿವಾಟಿಗೂ ಹಬ್ಬದ ಪ್ರಯುಕ್ತ ಇಂದು ನಡೆದ ವಹಿವಾಟಿಗೆ ಹೋಲಿಕೆ ಮಾಡಿದರೆ ಹತ್ತು ಪಟ್ಟು ಜಾಸ್ತಿ ಗ್ರಾಹಕರು ಬರುತ್ತಾರೆ ಎಂದು ಹೇಳಿದ ಹೂವಿನ ವ್ಯಾಪಾರಿ ಅಂಜನ್ ಕುಮಾರ್.

ಲಕ್ಷ್ಮೀ ದೇವತೆಯನ್ನು ಪೂಜಿಸಿ ಕೃಪೆಗೆ ಪಾತ್ರರಾಗಲು ತಮ್ಮ ಶಕ್ತಾನುಸಾರ ಹೂವು, ವಿವಿದ ಬಗೆಯ ಹಣ್ಣುಗಳು ತುಳಸಿ, ಬಿಲ್ವಾರ ಕನಕಾಂಬರ, ಕಾಕಡ, ಕೇದಿಗೆ ರುದ್ರಾಕ್ಷಿ ಹೂ ತಮಗೆ ಸೇವಂತಿಗೆ ಸೇರಿದಂತೆ ಹಾರ ತುರಾಯಿಗಳನ್ನು ಕೊಳ್ಳಲು ಬೆಳಗಿನೆಂದ ಸಂಜೆವರೆಗೂ ವ್ಯಾಪಾರ ವಹಿವಾಟು ಭರ್ಜರಿ ಆಗಿ ನಡೆಯುತ್ತಿದೆ. ಎಲ್ಲಿ ನೋಡಿದರೂ ಜನಸಾಗರವೇ ಹರಿದು ಬಂದಂತೆ ಕಾಣುತ್ತಿದೆ ಕೆ.ಆರ್ .ಮಾರುಕಟ್ಟೆ. ತುಂತುರು ಮಳೆಯನ್ನು ಲೆಕ್ಕಿಸದೆ ತಮ್ಮ ವಸ್ತುಗಳನ್ನು ಗ್ರಾಹಕರು ಕೊಳ್ಳಲು ಮುಗಿಬಿಳುತ್ತಿದ್ದಾರೆ..

ಫ್ಲೈ ಓವರ್ ಮೇಲೆ ಮತ್ತು ಕೆಳಗಡೆ ಬಾಳೆಕಂದುಗಳು ಮಾವಿನ ಎಲೆಗಳ ಕಂತೆಗಳು ಲೋಡ್ ಗಟ್ಟೆಲೇ ತಂದು ಮಾರಾಟಕ್ಕಿಟ್ಟಿರು ದೃಷ್ಯಗಳು ಸರ್ವೇ ಸಾಮಾನ್ಯವಾಗಿದೆ.

ಕೊಚ್ಚೆ ಮೂತ್ರ ವಿಸರ್ಜನೆಯ ಜಾಗಗಳನ್ನು ಬಿಡದೆ ಅತಿಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದುದು ಕಂಡು ಬಂತು.

ನೆನ್ನೆ ರಾತ್ರಿಯೇ ಎರಡು ಲಾರಿ ಲೋಡ್ ಬಾಳೆ ಕಂದು ತಂದಿದ್ದ ವ್ಯಾಪಾರಿ ಅರಸಪ್ಪ ಪ್ರತಿ ವರ್ಷ ನಾಲ್ಕು ಲೋಡ್ ಬಾಳೆ ಕಂದು ಖರ್ಚಾಗುತ್ತಿತ್ತು ಈ ವರ್ಷ ಒಂದುವರೆ ಲೋಡ್ ಕರ್ಚಾಗಿದೆ ಅಷ್ಟೇ ವ್ಯಾಪಾರ ಕಳೆದ ವರ್ಷದಷ್ಟು ಇಲ್ಲ ಇದ್ದುದರಲ್ಲಿ ಪರವಾಗಿಲ್ಲ ಎಂದು ಹೇಳಿದರು.

ಮಾರುಕಟ್ಟೆಯಲ್ಲಿ ವ್ಯಾಪಾರ  ವಹಿವಾಟು ಬಿರುಸಾಗಿರುವ ಕಾರಣ. ಜನದಟ್ಟಣೆ ಪ್ರವಾಹೋಪಾದಿಯಲ್ಲಿ ಇರುವುದರಿಂದ ಜೇಬುಗಳ್ಳತನ ಆಗುವ ಮುನ್ನೆಚ್ಚರಿಕೆಯ ಕ್ರಮಾವಾಗಿ ಪೋಲಿಸರು ಮೈಕ್ ನಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ, ಆದರೆ ಅವರ ಎಚ್ಚರಿಕೆಯ ಕಡೆ ಗಮನ ನೀಡುವಷ್ಟು ಪುರಸೊತ್ತಿಲ್ಲ. ಸದ್ಯ ಜನರು ತಮಗೆ ಬೇಕಾದ ವಸ್ತುಗಳನ್ನು ಕೊಂಡು ಮನೆ ತಲುಪಿದರೆ ಸಾಕು ಎನ್ನುವಷ್ಟು ಹೆಣಗಾಡಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.

ಜನಸಂಚರ ಮತ್ತು ವಾಹನ ಸಂಚಾರ ಸುಗಮಗೊಳಿಸಲು ಪೋಲಿಸರು ಹರ ಸಾಹಸ ಪಡುವಂತಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos