ಕೆ.ಎಸ್.ಆರ್.ಟಿ.ಸಿ. ಹೊಸ ಸೇವೆ ‘ಕನಸಿನೊಂದಿಗೆ ಪ್ರಯಾಣಿಸಿ..’

ಕೆ.ಎಸ್.ಆರ್.ಟಿ.ಸಿ. ಹೊಸ ಸೇವೆ ‘ಕನಸಿನೊಂದಿಗೆ ಪ್ರಯಾಣಿಸಿ..’

ಬೆಂಗಳೂರು, ಏ. 24, ನ್ಯೂಸ್ ಎಕ್ಸ್ ಪ್ರೆಸ್: ದೇಶದ ಸರ್ಕಾರಿ ರಸ್ತೆ ಸಾರಿಗೆ ನಿಯಮಗಳಲ್ಲಿ ತನ್ನದೇ ಆದ ಛಾಪು ಮೂಡಿಸಿ ಹೊಸ ಹೊಸ ಸೇವೆಗಳನ್ನು ಮೊದಲೇ ಪರಿಚಯ ಮಾಡುವಲ್ಲಿ ಹೆಸರು ಮಾಡಿರುವ ಕೆಎಸ್ಆರ್‌ಟಿಸಿಯು ಸ್ಲೀಪ್ ಲೈಕ್ ಎ ಬೇಬಿ ನಂತರ ಟ್ರಾವೆಲ್ ವಿತ್ ಡ್ರೀಮ್ ಎನ್ನುತ್ತಿದೆ. ಸಾರಿಗೆ ಸಂಸ್ಥೆಯ ಈ ಹೊಸ ಸೇವೆಗೆ ಪ್ರಯಾಣಿಕರಂತೂ ಫುಲ್ ಖುಷ್​ ಆಗಿದ್ದಾರೆ. ಹೌದು, ಪ್ರೀಮಿಯಂ ಸಾರಿಗೆ ಸೇವಾ ವಿಭಾಗದಲ್ಲಿ ಈಗಾಗಲೇ ಕೆಎಸ್ಆರ್‌ಟಿಸಿ ಡೀಲಕ್ಸ್, ವೋಲ್ವೋ ಸೆಮಿ ಸ್ಲೀಪರ್, ಕರೋನ ಸ್ಲೀಪರ್​ ಸೀಟ್​ಗಳ ಸೇವೆ ಒದಗಿಸುತ್ತಿವೆ. ಇದೇ ಮೊದಲ ಬಾರಿಗೆ ವೋಲ್ವೋದಲ್ಲಿ ಸ್ಲೀಪರ್ ಸೇವೆಯನ್ನು ಪರಿಚಯಿಸಿದೆ. ಈವರೆಗೂ ವೋಲ್ವೋ ಮತ್ತು ಸ್ಕ್ಯಾನಿಯಾ ಕಂಪನಿಯ ಮಲ್ಟಿ ಆ್ಯಕ್ಸಲ್ ಬಸ್​ಗಳೇ ಸಾರಿಗೆ ನಿಗಮದ ಅತ್ಯಂತ ಐಷಾರಾಮಿ ಬಸ್​ಗಳಾಗಿದ್ದು, ಸ್ಲೀಪ್‌ ಲೈಕ್ ಎ ಬೇಬಿ ಟ್ಯಾಗ್ ಲೈನ್​ನೊಂದಿಗೆ ಈ ಬಸ್​ಗಳ ಸೇವೆ ಒದಗಿಸಲಾಗುತ್ತಿದೆ. ಈಗ ಇದೇ ಸರಣಿಯ ಮುಂದುವರೆದ ಭಾಗ ಎನ್ನುವಂತೆ ವೋಲ್ವೋ ಮಲ್ಟಿ ಆ್ಯಕ್ಸಲ್ ಬಸ್​ಗಳಲ್ಲಿ ಸ್ಲೀಪರ್ ಸೇವೆಯನ್ನು ಪರಿಚಯಿಸಿದೆ. ಈಗಾಗಲೇ ಸ್ಲೀಪರ್ ಸೇವೆ ಒದಗಿಸುತ್ತಿರುವ ಕರೋನಾ ಬಸ್​​ಗಳಿಗೆ ಇಡಲಾಗಿರುವ ಅಂಬಾರಿ ಹೆಸರನ್ನೇ ಇದಕ್ಕೂ ಬಳಸಿದ್ದು ಅಂಬಾರಿ ಡ್ರೀಮ್‌ಕ್ಲಾಸ್ ಎಂದು ಹೆಸರಿಡಲಾಗಿದೆ. ಜೊತೆಗೆ ಇದಕ್ಕೆ ಕನಸಿನೊಂದಿಗೆ ಪ್ರಯಾಣಿಸಿ(ಟ್ರಾವೆಲ್ ವಿತ್ ಡ್ರೀಮ್) ಎನ್ನುವ ಟ್ಯಾಗ್ ಲೈನ್ ಬಳಸಿ ಪ್ರಯಾಣಿಕರನ್ನು ಮತ್ತಷ್ಟು ಆಕರ್ಷಿಸಲಾಗುತ್ತಿದೆ. ಮಲ್ಟಿ ಆ್ಯಕ್ಸಲ್ ಆಗಿರುವ ಕಾರಣ ಎಂತಹ ರಸ್ತೆಯಲ್ಲಿಯೂ ಬಸ್ ಅಲ್ಲಾಡುವುದಿಲ್ಲ ಜೊತೆಗೆ ಬಸ್​ನ ಇಂಜಿನ್ ಸದ್ದು ಕೂಡ ಬಸ್ಸೊಳಿಗಿನ ಪ್ರಯಾಣಿಕರಿಗೆ ಕೇಳಿಸುವುದಿಲ್ಲ. ಒಂದು ರೀತಿಯಲ್ಲಿ ಮನೆಯಲ್ಲಿ‌ ಮಲಗಿದ ಅನುಭವ ನೀಡುತ್ತದೆ ಎನ್ನುತ್ತಾರೆ ಇಲಾಖೆ ಸಿಬ್ಬಂದಿ. ಸೋಮವಾರದಿಂದ ಅಂಬಾರಿ ಡ್ರೀಮ್ ಕ್ಲಾಸ್ ಬಸ್​ಗಳನ್ನು ರಸ್ತೆಗಿಳಿಸಲಾಗಿದೆ. ಬೆಂಗಳೂರು-ವಿಜಯವಾಡ, ಬೆಂಗಳೂರು-ಪೂಣೆ, ಬೆಂಗಳೂರು- ಸಿಕಂದರಾಬಾದ್ ನಡುವೆ ಆರಂಭಿಕ‌ ಹಂತವಾಗಿ ಈ ಬಸ್​ಗಳ ಸಂಚಾರ ಆರಂಭಿಸಲಾಗಿದೆ. ಮೂರು ಮಾರ್ಗಗಳಲ್ಲಿ ಸದ್ಯ ಆರು ಬಸ್​ಗಳು ಸಂಚರಿಸುತ್ತಿದ್ದು, ಸದ್ಯದಲ್ಲೇ ಮತ್ತಷ್ಟು ಮಾರ್ಗಕ್ಕೂ ಈ ಬಸ್​ಗಳ ಸೇವೆ ವಿಸ್ತರಣೆಯಾಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos