ಬೆಂಗಳೂರು, ಜ. 1 : ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ಎ. ಸುಬ್ರಮಣ್ಯೇಶ್ವರ ರಾವ್ ಅವರನ್ನು ಐಜಿಪಿ ದರ್ಜೆಯ ಆಂತರಿಕ ಭದ್ರತೆ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಸಿಐಡಿಯಲ್ಲಿ ಎಸ್ಪಿಯಾಗಿದ್ದ ಡಾ ಚಂದ್ರಗುಪ್ತ ಅವರನ್ನು ಡಿಐಜಿ ಕಾರಾಗೃಹ ಹುದ್ದೆಗೆ ಮತ್ತು ಕರ್ನಾಟಕ ಲೋಕಾಯುಕ್ತದಲ್ಲಿ ಎಸ್ಪಿಯಾಗಿದ್ದ ಡಾ. ಕೆ. ತ್ಯಾಗರಾಜನ್ ಅವರನ್ನು ಡಿಐಜಿ ರ್ಯಾಂಕ್ ಗೆ ಸಿಐಡಿಗೆ ವರ್ಗಾಯಿಸಲಾಗಿದೆ.