ಬೆಂಗಳೂರು, ಜ. 06: ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಭಿನ್ನ ರೀತಿಯ ಪಾತ್ರಗಳ ಮೂಲಕ ಅಭಿಮಾನಿಗಳ ಮನ ಗೆದ್ದ ನಟಿ ಪ್ರೇಮ. ಹೌದು, ‘ಸವ್ಯಸಾಚಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದವರು ನಟಿ ಪ್ರೇಮಾ. ನಂತರ ನಟಿಸಿದ ‘ಓಂ’ ಬ್ಲಾಕ್ ಬ್ಲಸ್ಟರ್ ಎನಿಸಿಕೊಂಡಿತು. ನಂತರ ಹಿಂತಿರುಗಿ ನೋಡದ ಇವರು ಸುಮಾರು 15 ವರ್ಷಕ್ಕೂ ಹೆಚ್ಚಿನ ಕಾಲ ನಾಯಕಿಯಾಗಿ ಕಾಣಿಸಿಕೊಂಡರು. ವಿಶೇಷವೆಂದರೆ ಇಂದು ಇವರ ಜನ್ಮದಿನ.
ಇಂದು 42ನೇ ವಸಂತಕ್ಕೆ ಕಾಲಿಟ್ಟ ಪ್ರೇಮಾ, ಸದ್ಯ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲವಾದರೂ ಈಗಲೂ ಅದೇ ಛಾರ್ಮ್ ಉಳಿಸಿಕೊಂಡಿದ್ದಾರೆ. ‘ಯಜಮಾನ’, ‘ಕನಸುಗಾರ’, ‘ಪ್ರೇಮ’, ‘ಕೌರವ’, ಆಪ್ತಮಿತ್ರ’, ‘ಸಿಂಗಾರವ್ವ’, ‘ಉಪೇಂದ್ರ’, ‘ಚಂದ್ರಮುಖಿ ಪ್ರಾಣಸಖಿ’ ಸೇರಿದಂತೆ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.