ಇಂದು ಅಯೋಧ್ಯ ಭೂ ವಿವಾದ ಸುಪ್ರೀಂ ವಿಚಾರಣೆ

ಇಂದು ಅಯೋಧ್ಯ ಭೂ ವಿವಾದ  ಸುಪ್ರೀಂ ವಿಚಾರಣೆ

ನವದೆಹಲಿ, ಮೇ. 10,ನ್ಯೂಸ್ ಎಕ್ಸ್ ಪ್ರೆಸ್: ಅಯೋಧ್ಯೆ ರಾಮಜನ್ಮ ಭೂಮಿ ವಿವಾದ ಇಂದು ಸುಪ್ರೀಂ ವಿಚಾರಣೆ ನಡೆಸಲಿದೆ. ಅಯೋಧ್ಯೆ ರಾಮಜನ್ಮಭೂಮಿ-ಬಾಬರಿ ಮಸೀದಿ ಸ್ಥಳ ವಿವಾದವನ್ನು ಮಧ್ಯಸ್ಥಿಕೆಗೆ ವಹಿಸಿದ ಎರಡು ತಿಂಗಳ ಬಳಿಕ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್​ ಗೋಗೊಯ್, ನ್ಯಾಯಮೂರ್ತಿಗಳಾದ ಎಸ್​.ಎ.ಬೊಬ್ಬೆ, ಡಿ.ವೈ. ಚಂದ್ರಚೂಡ್​, ಅಶೋಕ್​ ಭೂಷಣ್​ ಹಾಗೂ ಅಬ್ದುಲ್​ ನಜೀರ್​ ಅವರ ಪಂಚ ಸದಸ್ಯ ಪೀಠ ಇಂದು ಬೆಳಿಗ್ಗೆ 10.30ಕ್ಕೆ ಈ ಕುರಿತು ವಿಚಾರಣೆ ನಡೆಸಲಿದ್ದಾರೆ.

ಮಾರ್ಚ್ 8 ರಂದು ಅಯೋಧ್ಯೆ ವಿವಾದ ಪ್ರಕರಣದ ಇತ್ಯರ್ಥಕಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಎಫ್.ಎಂ.ಐ ಖಲಿಫುಲ್ಲಾ, ಆಧ್ಯಾತ್ಮಿಕ ಗುರು ಮತ್ತು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಅವರನ್ನು ಸಂಧಾನಕಾರರನ್ನಾಗಿ ನೇಮಿಸಿತ್ತು. ಇಂದು ಸಮಿತಿ ವರದಿ ಸಲ್ಲಿಸಲಿದ್ದು, ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

ಫ್ರೆಶ್ ನ್ಯೂಸ್

Latest Posts

Featured Videos